ಸುರಪುರ: ರಾಜ್ಯದಲ್ಲಿ ದೊಡ್ಡ ಮಟ್ಟದ ಸುದ್ದಿಗೆ ಗ್ರಾಸವಾಗಿರುವ ಡ್ರಗ್ಸ್ ದಂಧೆಯನ್ನು ನಿಲ್ಲಿಸುವಂತೆ ತಾಲೂಕು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಡ್ರಗ್ಸ್ ದಂಧೆ ತಡೆಗೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರತಿಭಟನೆ
ಸುರಪುರ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಬೃಹತ್ ಗಾತ್ರದ ಪತ್ರದಲ್ಲಿ 500ಕ್ಕೂ ಹೆಚ್ಚು ಜನರ ಸಹಿ ಸಂಗ್ರಹಿಸುವ ಮೂಲಕ ಡ್ರಗ್ಸ್ ದಂಧೆಗೆ ಸಾರ್ವಜನಿಕರಿಂದಲೂ ವಿರೋಧ ಇರುವುದನ್ನು ಸಾಬೀತುಪಡಿಸಿದರು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಬೃಹತ್ ಗಾತ್ರದ ಪತ್ರದಲ್ಲಿ ಐದು ನೂರಕ್ಕೂ ಹೆಚ್ಚು ಜನರ ಸಹಿ ಸಂಗ್ರಹಿಸುವ ಮೂಲಕ ಡ್ರಗ್ಸ್ ದಂಧೆಗೆ ಸಾರ್ವಜನಿಕರಿಂದಲೂ ವಿರೋಧ ಇರುವುದನ್ನು ಸಾಬೀತುಪಡಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿಯ ವಿಭಾಗಿಯ ಸಹ ಪ್ರಮುಖ ಡಾ. ಉಪೇಂದ್ರ ನಾಯಕ್ ಸುಬೇದಾರ್ ಮಾತನಾಡಿ, ಡ್ರಗ್ಸ್ ಎನ್ನುವುದು ಇಡೀ ದೇಶವನ್ನೇ ಬೌದ್ಧಿಕವಾಗಿ ಸರ್ವನಾಶ ಮಾಡುವ ವಸ್ತುವಾಗಿದ್ಧು, ಇದರಿಂದ ಲಕ್ಷಾಂತರ ಜನರು ತಮ್ಮ ಮಾನಸಿಕ ಆರೋಗ್ಯ ಮತ್ತು ದೈಹಿಕ ಚೈತನ್ಯವನ್ಞು ಹಾಳು ಮಾಡಿಕೊಳ್ಳುತ್ತಾರೆ. ಈ ಡ್ರಗ್ಸ್ ವಿದ್ಯಾರ್ಥಿಗಳಿಗೆ ದೊಡ್ಡ ಮಾರಕವಾಗಿದ್ದು ಇದನ್ನು ಸಂಪೂರ್ಣ ಮಟ್ಟ ಹಾಕಬೇಕು. ಈ ದಂಧೆಯ ಹಿಂದೆ ಯಾರಿದ್ದಾರೆ ಅವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿದರು.