ಯಾದಗಿರಿ: ಕುಡಿತದ ಅಮಲಿನಲ್ಲಿ ಮದ್ಯ ವ್ಯಸನಿಗಳು ಶಿಕ್ಷಕರು ಹಾಗೂ ವಿಧ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಸಮೀಪದ ಕ್ಯಾತ್ನಾಳ ಗ್ರಾಮದಲ್ಲಿ ನಡೆದಿದೆ. ಕ್ಯಾತ್ನಾಳ ಗ್ರಾಮದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಗೆ ಕುಡುಕರ ಹಾವಳಿ ಹೆಚ್ಚಾಗಿದೆ. ನಿತ್ಯ ಕುಡಿದು ಬಂದು ದಾಂಧಲೆ ಮಾಡುತ್ತಾರೆ. ಕುಡುಕರ ಅವಾಂತರಕ್ಕೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬೇಸತ್ತು ಹೋಗಿದ್ದಾರೆ. ಕುಡುಕರ ಹಾವಳಿ ಶಾಲಾ ಮಕ್ಕಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಶಿಕ್ಷಕರಿಗೆ ಪಾಠ ಹೇಳಲು ತೀವ್ರ ತೊಂದರೆಯಾಗುತ್ತಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ.
ಮದ್ಯ ವ್ಯಸನಿಗಳಿಂದ ಶಿಕ್ಷಕರು, ವಿದ್ಯಾರ್ಥಿಗಳ ಮೇಲೆ ಹಲ್ಲೆ; ಕುಡುಕನ ಕೂಡಿ ಹಾಕಿದ ಮಕ್ಕಳು! - ಯಾದಗಿರಿ ಹಲ್ಲೆ ಸುದ್ದಿ
ಯಾದಗಿರಿ ಜಿಲ್ಲೆಯಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಮಕ್ಕಳ ಪಾಠ ಕೇಳುತ್ತಿರುವ ಸಮಯದಲ್ಲಿ ಕುಡುಕನೊಬ್ಬ ಗಲಾಟೆ ಮಾಡಿರುವ ಘಟನೆ ಕ್ಯಾತ್ನಾಳ ಗ್ರಾಮದಲ್ಲಿ ನಡೆದಿದೆ.

ಹಲ್ಲೆ ಬಗ್ಗೆ ಶಿಕ್ಷಕರ ಹೇಳಿಕೆ
ಹಲ್ಲೆ ಬಗ್ಗೆ ಶಿಕ್ಷಕರ ಹೇಳಿಕೆ
ಶಾಲಾ ಆವರಣದಲ್ಲಿ ಪುಂಡರು ಮದ್ಯಪಾನ ಮಾಡುವುದು ಹಾಗೂ ಇಸ್ಪೀಟ್ ಆಡುತ್ತಾರೆ. ಮಹಿಳಾ ಶಿಕ್ಷಕಿ ಮೇಲೆ ಬಾಟಲಿ ಎಸೆದು ಹಲ್ಲೆ ಮಾಡಲು ಯತ್ನಿಸಿದ್ದಾರೆ. ಇದರಿಂದ ಬೇಸತ್ತ ಶಿಕ್ಷಕರು, ವಿದ್ಯಾರ್ಥಿಗಳು ಕುಡುಕನನ್ನು ಕೂಡಿಹಾಕಿದ್ದಾರೆ. ನಂತರ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ವಡಗೇರಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated : Jul 29, 2022, 2:28 PM IST