ಕರ್ನಾಟಕ

karnataka

ETV Bharat / state

ಅಪಾಯದ ಮಟ್ಟ ತಲುಪಿದ ಆಲಮಟ್ಟಿ ಜಲಾಶಯ: ಕೃಷ್ಣ ನದಿಗೆ 2 ಲಕ್ಷ ಕ್ಯೂಸೆಕ್​ ನೀರು

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಸವ ಸಾಗರ ಜಲಾಶಯಕ್ಕೆ ಆಲಮಟ್ಟಿ ಡ್ಯಾಮ್​​ನಿಂದ ನೀರು ಹರಿ ಬಿಡಲಾಗಿದೆ.

ಆಲಮಟ್ಟಿ ಜಲಾಶಯ

By

Published : Jul 30, 2019, 11:34 PM IST

ಯಾದಗಿರಿ:ಮಹಾರಾಷ್ಟ್ರ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯ ತುಂಬಿದೆ. ಹಾಗಾಗಿ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಸವ ಸಾಗರ ಜಲಾಶಯಕ್ಕೆ ಆಲಮಟ್ಟಿ ಡ್ಯಾನಿಂದ ನೀರು ಬಿಡಲಾಗಿದೆ.

ಈಗಾಗಲೇ ಬಸವ ಸಾಗರ ಜಲಾಶಯದಿಂದ ಕೃಷ್ಣ ನದಿಗೆ ನೀರು ‌ಬಿಡಲಾಗಿದ್ದು, ಆಲಮಟ್ಟಿ ಜಲಾಶಯದ ನೀರು ಅಪಾಯದ ಮಟ್ಟ ತಲುಪುತ್ತಿದ್ದಂತೆ 1.90.000 ಕ್ಯೂಸೆಕ್ ನೀರನ್ನು ಅಧಿಕಾರಿಗಳು ಬಸವ ಸಾಗರ ಜಲಾಶಯಕ್ಕೆ ಹರಿಸಿದ್ದಾರೆ.

ಆಲಮಟ್ಟಿ ಜಲಾಶಯ

ಬಸವ ಸಾಗರ ಜಲಾಶಯಕ್ಕೆ ನೀರು ಹರಿಸಲಾಗುತ್ತಿದ್ದಂತೆ ಡ್ಯಾಂ ತುಂಬಿ ತುಳುಕುತ್ತಿದೆ. ಹೀಗಾಗಿ ಕೃಷ್ಟ ಭಾಗ್ಯ ಜಲ ನಿಗಮದ ಅಧಿಕಾರಿಗಳು ಎಚ್ಚೆತ್ತುಕೊಂಡು ಬಸವ ಸಗಾರ ಜಲಾಶಯದಿಂದ 24 ಗೈಟ್​ಗಳ ಪೈಕಿ 20 ಗೇಟ್​​​ಗಳನ್ನು ತೆರೆಯುವ ಮುಖಾಂತರ ಇಂದು ರಾತ್ರಿಯಿಂದಲೇ 2 ಲಕ್ಷ ಕ್ಯೂಸೆಕ್ ನೀರು ಕೃಷ್ಣ ನದಿಗೆ ಹರಿಬಿಡಲಾಗುತ್ತಿದೆ. ಹೀಗಾಗಿ ನದಿ ಪಾತ್ರದ ಜನರಿಗೆ ಜಿಲ್ಲಾಡಳಿತ ಹೈ ಅಲರ್ಟ್​​​ ಘೋಷಣೆ ಮಾಡಿದೆ.

ABOUT THE AUTHOR

...view details