ಸುರಪುರ :ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕೋಡಾಲ್ ಗ್ರಾಮದಲ್ಲಿ ಸ್ವತಃ ತಾಯಿಯೇ ತನ್ನಿಬ್ಬರು ಮಕ್ಕಳಿಗೆ ವಿಷ ಉಣಿಸಿ ಕೊಂದಿರುವ ಘೋರ ಘಟನೆ ನಡೆದಿದೆ.
ಜ್ಯೂಸ್ ಅಂತಾ ತಿಳಿದು ಮಕ್ಕಳು ವಿಷ ಸೇವಿಸಿ ಮೃತ ಪಟ್ಟಿದ್ದಾರೆ ಎಂದು ಹೇಳಿ ನಾಟಕವಾಡಿದ್ದ ಪಾಪಿ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ವಡಗೇರಾ ತಾಲೂಕಿನ ಕೋಡಾಲ ಗ್ರಾಮದಲ್ಲಿ ಫೆಬ್ರವರಿ 27 ರಂದು 2 ವರ್ಷದ ಖೈರೊನ್ ಹಾಗೂ 4 ತಿಂಗಳ ಅಫ್ಸಾನಾ ಮೃತಪಟ್ಟಿದ್ದರು.
ಮಕ್ಕಳು ವಿಷ ಸೇವಿಸಿದ್ದನ್ನು ಅರಿತು ತಾಯಿ ಸೈನಾಜ ಬೇಗಂ ಕೂಡ ನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಅಂತಾ ಬಿಂಬಿಸಲಾಗಿತ್ತು. 2 ವರ್ಷದ ಖೈರೊನ್ ಆಟವಾಡುತ್ತಾ ವಿಷದ ಬಾಟಲ್ ತೆಗೆದುಕೊಂಡು ತನ್ನ ನಾಲ್ಕು ತಿಂಗಳ ತಂಗಿ ಅಫ್ಸಾನಾಗೆ ಜ್ಯೂಸ್ ಎಂದು ವಿಷ ಕುಡಿಸಿದ್ಲು ಎಂದು ತಾಯಿ ಸೈನಾಜ ಬೇಗಂ ಎಲ್ಲರನ್ನೂ ನಂಬಿಸಿದ್ದಳು.