ಕೇಸ್ ಕುರಿತು ಮಾಹಿತಿ ನೀಡಿದ ಯಾದಗಿರಿ ಜಿಲ್ಲಾ ಎಸ್ಪಿ ಡಾ. ಸಿ. ಬಿ. ವೇದಮೂರ್ತಿ ಯಾದಗಿರಿ: ಮದ್ಯ ಸೇವನೆ ಮಾಡಲು ಹಣ ಕೇಳಿದ್ದ ವ್ಯಕ್ತಿಯೊಬ್ಬನಿಗೆ ಕೊಡಲಿಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ ಗ್ರಾಮದಲ್ಲಿ ನಡೆದಿದೆ. ರಾಜಾಸಾಬ ರಾಜನಕೋಳೂರು (38) ಕೊಲೆಯಾದ ವ್ಯಕ್ತಿ. ವಿರೇಶ ಕೊಲೆ ಮಾಡಿರುವ ಆರೋಪಿ.
ಕಂಠಪೂರ್ತಿ ಕುಡಿಸಿ, ಹೊಲಕ್ಕೆ ಕರೆದೊಯ್ದು ಮಾರಣಾಂತಿಕ ಹಲ್ಲೆ.. ಮದ್ಯ ಸೇವೆನೆಗೆ ಹಣ ನೀಡುವಂತೆ ಪೀಡಿಸುತ್ತಿದ್ದ ಎಂಬ ಕಾರಣಕ್ಕೆ ವಿರೇಶ್ ಎಂಬಾತನು ರಾಜಸಾಬನಿಗೆ ಕಂಠಪೂರ್ತಿ ಕುಡಿಸಿ, ಬಳಶೆಟ್ಟಿಹಾಳ ಗ್ರಾಮದ ಹೊರವಲಯದ ಹೊಲಕ್ಕೆ ಕರೆದೊಯ್ದು ಕೊಡಲಿಯಿಂದ ಕುತ್ತಿಗೆ, ತಲೆಗೆ ಹೊಡೆದು ಹತ್ಯೆಗೆ ಯತ್ನಿಸಿದ್ದನು. ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ರಾಜಾಸಾಬನನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಕಲಬುರಗಿಯಲ್ಲಿ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ:ಹಳೇ ದ್ವೇಷಕ್ಕೆ ಹುಬ್ಬಳ್ಳಿಯಲ್ಲಿ ಹರಿಯಿತು ನೆತ್ತರು.. ಯುವಕನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ
ಘಟನಾ ಸ್ಥಳಕ್ಕೆ ಕುಟುಂಬಸ್ಥರು ಹೋದಾಗ ರಕ್ತದ ಮಡುವಿನಲ್ಲಿ ಬಿದ್ದಿ ರಾಜಾಸಾಬ.. ಕೊಡಲಿಯಿಂದ ರಾಜಾಸಾಬನ ಕುತ್ತಿಗೆ ಹಾಗೂ ತಲೆಗೆ ಹೊಡೆದು ತೀವ್ರವಾಗಿ ಹಲ್ಲೆ ಮಾಡಿದ ಬಳಿಕ ಊರಿಗೆ ಬಂದಿದ್ದ ವಿರೇಶ, ವಿಷಯವನ್ನು ಮನೆಯವರಿಗೆ ತಿಳಿಸಿದ್ದಾನೆ. ಘಟನಾ ಸ್ಥಳಕ್ಕೆ ಕುಟುಂಬಸ್ಥರು ಹೋದಾಗ ರಕ್ತದ ಮಡುವಿನಲ್ಲಿ ಅರೆಪ್ರಜ್ಞಾಸ್ಥಿತಿಯಲ್ಲಿ ರಾಜಾಸಾಬ ಬಿದ್ದಿರುವುದು ಕಂಡುಬಂದಿತ್ತು.
ಇದನ್ನೂ ಓದಿ:ಮೊಬೈಲ್ ನೋಡುತ್ತಿದ್ದ ಮಗನ ಕೆನ್ನೆಗೆ ಬಾರಿಸಿದಳು ಅಮ್ಮ: ಹೆತ್ತವಳ ಕತ್ತು ಹಿಸುಕಿ ಕೊಂದ ಮಗ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಕೊಲೆ ಪ್ರಕರಣ ಕುರಿತು ಮಾಹಿತಿ.. ವಿಷಯ ತಿಳಿಯುತ್ತಿದ್ದಂತೆ ಹುಣಸಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ವಿರೇಶನನ್ನು ಬಂಧಿಸಲಾಗಿದ್ದು, ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಯಾದಗಿರಿ ಜಿಲ್ಲಾ ಎಸ್ಪಿ ಡಾ. ಸಿ. ಬಿ. ವೇದಮೂರ್ತಿ, 'ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯಪಾನ ಮಾಡಲು ಹಣ ಕೇಳುತ್ತಿದ್ದ ಎನ್ನುವ ವಿಷಯಕ್ಕೆ ಕೊಲೆ ನಡೆದಿದ್ದು, ಕೊಲೆಯಾದ ರಾಜಸಾಬನ ಪತ್ನಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ತನಿಖೆ ಮುಂದುವರೆದಿದೆ' ಎಂದಿದ್ದಾರೆ.
ಇದನ್ನೂ ಓದಿ:ದಂಪತಿ ನಡುವಿನ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯ: ಪತಿ ಬಂಧನ
ಪತ್ನಿ ಹತ್ಯೆಗೈದ ಪತಿ: ಇಂದು ಬೆಳಗ್ಗೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ವರದಾಪುರ ಗ್ರಾಮದಲ್ಲಿ ದಂಪತಿ ನಡುವೆ ಪ್ರಾರಂಭವಾದ ಕಲಹ ಕೊಲೆಯಲ್ಲಿ ಅಂತ್ಯ ಕಂಡಿದೆ. ಲಕ್ಷ್ಮೀ (33) ಕೊಲೆಯಾದ ಮಹಿಳೆ. ಗಂಡ ಭಂಗಿ ಮಲ್ಲಪ್ಪ (40) ಕೊಲೆ ಮಾಡಿದ ಆರೋಪಿ. ಕೌಟುಂಬಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದ್ದು, ಕೋಪದಲ್ಲಿ ಪತಿ ತನ್ನ ಪತ್ನಿಯನ್ನು ಹತ್ಯೆಗೈದಿದ್ದಾನೆ. ಆರೋಪಿಯನ್ನು ಮರಿಯಮ್ಮನಹಳ್ಳಿ ಪೊಲೀಸರು ಬಂಧಿಸಿ, ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ:350 ಪೊಲೀಸರಿಂದ ಶೋಧ! 6 ದಿನದ ಬಳಿಕ ಪತ್ತೆಯಾಯ್ತು ಕೊಲೆಯಾದ ಉದ್ಯಮಿಯ ಶವ