ಸುರಪುರ :ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಲೂಕಿನ ಬಾದ್ಯಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಇಂದು ಸಾವನ್ನಪ್ಪಿದ್ದಾರೆ.
ಶಾಂತಾ ಬಿ. ಮೃತ ಶಿಕ್ಷಕಿ. ಇವರು ಇದೇ 19ನೇ ತಾರೀಖಿ ನಂದು ಸಿದ್ದಾಪುರ ಬಳಿಯ ರಸ್ತೆಯಲ್ಲಿ ಸ್ಕೂಟಿ ಮೇಲೆ ಬಾದ್ಶಾಪುರ ಶಾಲೆಯಿಂದ ಮರಳಿ ಸುರಪುರಕ್ಕೆ ಬರುತ್ತಿರುವಾಗ ಎದುರು ಗಡೆಯಿಂದ ಬಂದ ಟಾಟಾ ಏಸ್ ವಾಹನದಲ್ಲಿದ್ದ ತಗಡುಗಳು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.