ಕರ್ನಾಟಕ

karnataka

ETV Bharat / state

ಯಾದಗಿರಿಯಲ್ಲಿ ಎರಡು ಕಡೆ ಎಸಿಬಿ ದಾಳಿ : 5 ಲಕ್ಷ ನಗದು, ಚಿನ್ನ ಹಾಗೂ ಬೆಳ್ಳಿ ವಶಕ್ಕೆ

ಯಾದಗಿರಿ ಜಿಲ್ಲೆಯಲ್ಲಿ ಎರಡು ಕಡೆಗಳಲ್ಲಿ ಏಕಕಾಲಕ್ಕೆ ಎಸಿಬಿ ದಾಳಿ ನಡೆದಿದೆ. ನಗದು, ಚಿನ್ನ, ಬೆಳ್ಳಿಯನ್ನು ವಶಕ್ಕೆ ಪಡೆದು ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮುಂದುವರೆಸಿದ್ದಾರೆ..

acb raid in yadgir
ಯಾದಗಿರಿಯಲ್ಲಿ ಎರಡು ಕಡೆ ಎಸಿಬಿ ದಾಳಿ : 5 ಲಕ್ಷ ನಗದು, ಚಿನ್ನ ಹಾಗೂ ಬೆಳ್ಳಿ ವಶಕ್ಕೆ

By

Published : Mar 16, 2022, 3:20 PM IST

Updated : Mar 16, 2022, 3:34 PM IST

ಯಾದಗಿರಿ :ಶಹಾಪುರ ನಗರದಎಸಿಬಿ ಅಧಿಕಾರಿಗಳು ಗುತ್ತಿಗೆದಾರನ ಮನೆ ಮೇಲೆ ದಾಳಿ ನಡೆಸಿದ್ದಾರೆ.ವಿದ್ಯಾರಣ್ಯ ಸ್ಕೂಲ್ ಮುಂಭಾಗದಲ್ಲಿರುವ ಗುತ್ತಿಗೆದಾರ ಖಂಡಪ್ಪಗೌಡರ ಮನೆ ಮೇಲೆ ಈ ದಾಳಿ ನಡೆದಿದೆ. ಅಧಿಕಾರಿಗಳು 5 ಲಕ್ಷ ನಗದು, ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ದಾಖಲೆ ಪರಿಶೀಲನೆ ಕಾರ್ಯ ಚುರುಕಾಗಿ ನಡೆದಿದೆ ಎಂದು ಎಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಖಂಡಪ್ಪಗೌಡ ಅವರು ಗೋಕಾಕ್‌ದ ಕೌಜಲಗಿ ವಿಭಾಗದಲ್ಲಿ ಕಾರ್ಯನಿರ್ವಾಹಕ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿರುವ ಬಸವರಾಜ ಪಾಟೀಲ್ ಅವರ ಸಹೋದರ ಎಂದು ತಿಳಿದು ಬಂದಿದೆ. ಅಲ್ಲದೆ ಅವರಿಗೆ ಸಂಬಂಧಿಸಿದ ಯರಗಟ್ಟಿ, ಬೆಂಗಳೂರು, ಧಾರವಾಡ, ಕಲಬುರಗಿ ಮನೆಗಳ ಮೇಲೂ ಏಕ ಕಾಲಕ್ಕೆ ಈ ದಾಳಿ ನಡೆಸಲಾಗಿದೆ.

ಇದನ್ನೂ ಓದಿ:ಎಸಿಬಿ ದಾಳಿ: ಲೋಕೋಪಯೋಗಿ ಎಇಇ ಮನೆಯಲ್ಲಿ ಚಿನ್ನದ ಗಟ್ಟಿ ಪತ್ತೆ!

ಬೀದರ್​ ಹಾಗೂ ಚಿಟಗುಪ್ಪ ತಾಲೂಕಿನ ಉಡಬಾಳ ಮನೆ ಮೇಲೆಯೂ ಎಸಿಬಿ ದಾಳಿ ನಡೆದಿದೆ. ಕಲಬುರಗಿ ಎ‌ಸಿಬಿ ಡಿವೈಎಸ್ಪಿ ಸಂತೋಷ ಬನ್ನಹಟ್ಟಿ‌ ನೇತೃತ್ವದಲ್ಲಿ ‌ಕಾರ್ಯಾಚರಣೆ ನಡೆದಿದೆ.

ಎಸಿಬಿ ದಾಳಿ

ಇನ್ನೊಂದೆಡೆ ಯಾದಗಿರಿಯ ಸಾಮಾಜಿಕ‌ ವಲಯ‌ ಅರಣ್ಯ ಇಲಾಖೆ ಅಧಿಕಾರಿ ರಮೇಶ ಕನಕಟ್ಟಿ ಅವರ ಮನೆ ಮೇಲೂ ಸಿಪಿಐ ಬಾಬಾಸಾಹೇಬ್ ನೇತೃತ್ವದಲ್ಲಿ ದಾಳಿ ನಡೆಸಿ, ಕಡತ ಪರಿಶೀಲನೆ ನಡೆಸಲಾಗಿದೆ. ಎಸಿಬಿ ದಾಳಿಯಲ್ಲಿ ಪೊಲೀಸ್ ಇನ್ಸ್​ಪೆಕ್ಟರ್​ ಪ್ರದೀಪ‌ ಕುಳಾ ಮತ್ತು ಸಿಬ್ಬಂದಿ ಇದ್ದರು.

Last Updated : Mar 16, 2022, 3:34 PM IST

ABOUT THE AUTHOR

...view details