ಕರ್ನಾಟಕ

karnataka

ETV Bharat / state

ಸ್ನಾನಕ್ಕೆಂದು ನದಿಗಿಳಿದ ಯುವಕ ನೀರುಪಾಲು: ಭೀಮಾ ನದಿಯಲ್ಲಿ ದುರ್ಘಟನೆ - Yadgir

ಮುದ್ನಾಳ್ ಗ್ರಾಮದ ಸ್ನೇಹಿತರಿಬ್ಬರು ಪೂಜೆ ಸಲ್ಲಿಸಲು ಭೀಮಾ ನದಿ ತೀರಕ್ಕೆ ಬಂದಿದ್ದರು. ಆ ವೇಳೆ, ಸಾಬಣ್ಣ ಎಂಬ ಯುವಕ ಕಾಲು ಜಾರಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.

yadgir
ಸಾಬಣ್ಣ-ಭೀಮಾ ನದಿಯಲ್ಲಿ ಕೊಚ್ಚಿ ಹೋದ ಯುವಕ

By

Published : Oct 12, 2021, 8:09 PM IST

ಯಾದಗಿರಿ:ಸ್ನಾನಕ್ಕೆಂದು ನದಿಗಿಳಿದಿದ್ದ ಯುವಕ ಕಾಲು ಜಾರಿ ನೀರು ಪಾಲಾದ ದುರ್ಘಟನೆ ಯಾದಗಿರಿ ನಗರದ ಹೊರಭಾಗದ ಭೀಮಾ ನದಿಯಲ್ಲಿ ನಡೆದಿದೆ.

ಸಾಬಣ್ಣ ಭೀಮಾ ನದಿಯಲ್ಲಿ ಕೊಚ್ಚಿ ಹೋದ ಯುವಕ. ಸಮೀಪದ ಮುದ್ನಾಳ್ ಗ್ರಾಮದ ಸ್ನೇಹಿತರಿಬ್ಬರು ಪೂಜೆ ಸಲ್ಲಿಸಲು ನದಿ ತೀರಕ್ಕೆ ಬಂದಿದ್ದರು. ಆ ವೇಳೆ, ಸಾಬಣ್ಣ ಎಂಬ ಯುವಕ ಕಾಲು ಜಾರಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ.

ದೃಶ್ಯ ಕಂಡು ಸ್ನೇಹಿತನನ್ನು ರಕ್ಷಣೆ ಮಾಡಲು ನದಿಗಿಳಿದ ಇನ್ನೊಬ್ಬ ಸ್ನೇಹಿತ ಭೀಮರಾಯ ಕೂಡ ನದಿಯಲ್ಲಿ ಕೊಚ್ಚಿಕೊಂಡು ಹೋಗುವಾಗ ನದಿಯ ಮಧ್ಯಭಾಗದಲ್ಲಿರುವ ಬೃಹತ್ ಕಲ್ಲಿನ ಆಶ್ರಯ ಪಡೆದು ಸಹಾಯಕ್ಕಾಗಿ ಅಂಗಲಾಚಿದ್ದಾನೆ. ನಂತರ ಸ್ಥಳೀಯರು ಹಗ್ಗ ಕಟ್ಟಿ ಭೀಮರಾಯನನ್ನು ರಕ್ಷಣೆ ಮಾಡಿದ್ದಾರೆ.

ಸದ್ಯ ಬೋಟ್ ಮೂಲಕ ನೀರು ಪಾಲಾದ ವ್ಯಕ್ತಿಯ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಭೇಟಿ ನೀಡಿದ್ದಾರೆ.

ಇದನ್ನೂ ಓದಿ:ಮಗಳ ಮೇಲೆ ಅತ್ಯಾಚಾರವೆಸಗಿ ವೇಶ್ಯಾವಾಟಿಕೆಗೆ ತಳ್ಳಿದ ತಂದೆ.. SP ಜಿಲ್ಲಾಧ್ಯಕ್ಷ ಸೇರಿ 28 ಮಂದಿ ವಿರುದ್ಧ FIR

ABOUT THE AUTHOR

...view details