ಕರ್ನಾಟಕ

karnataka

ETV Bharat / state

ಕೊರೊನಾ ವಾರಿಯರ್ಸ್​ಗೆ ಸುರಪುರದಲ್ಲಿ ಪುಷ್ಪವೃಷ್ಠಿ ಮೂಲಕ ಸನ್ಮಾನ - quaratine center at surpur

ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರು, ಕ್ವಾರಂಟೈನ್ ಕೇಂದ್ರದ ಸಿಬ್ಬಂದಿ ಸೇರದಂತೆ ಕೊರೊನಾ ವಾರಿಯರ್ಸ್​ಗೆ ಸನ್ಮಾನ ಮಾಡಲಾಯಿತು. ಸುರಪುರದ ಕ್ವಾರಂಟೈನ್ ಕೇಂದ್ರದಲ್ಲಿ ಎಲ್ಲರಿಗೂ ಪುಷ್ಪವೃಷ್ಠಿ ಸುರಿಸಿ ಅಭಿನಂದನೆ ಸಲ್ಲಿಸಲಾಯಿತು.

A tribute for corona warriors in Surapura Taluk quarantine center
ಕೊರೊನಾ ವಾರಿಯರ್ಸ್​ಗೆ ಸುರಪುರದಲ್ಲಿ ಪುಷ್ಪವೃಷ್ಠಿ ಮೂಲಕ ಸನ್ಮಾನ

By

Published : May 26, 2020, 9:43 PM IST

ಸುರಪುರ (ಯಾದಗಿರಿ):ತಾಲೂಕಿನ ಕ್ವಾರಂಟೈನ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗೆ ಹಾಗೂ ಎಲ್ಲಾ ಕೊರೊನಾ ವಾರಿಯರ್ಸ್​ಗಳಿಗೆ ಸನ್ಮಾನಿಸಲಾಯಿತು.

ವಿಶೇಷವಾಗಿ ಅಡುಗೆ ಸಿಬ್ಬಂದಿ ಹಾಗೂ ಗ್ರಾಮ ಸಹಾಯಕರು ಸೇರಿದಂತೆ ಕರ್ತವ್ಯದಲ್ಲಿರುವ ಎಲ್ಲಾ ಶಿಕ್ಷಕರೂ ಹೋರಾಟಗಾರರೇ. ನಮ್ಮನ್ನು ರಕ್ಷಿಸಿಸಲು ಹೋರಾಟ ಮಾಡುತ್ತಿರುವ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಲಾಗುವುದು ಎಂದು ಕಾರ್ಯಕ್ರಮದ ಆಯೋಜಕರಾದ ತಾಲೂಕು ಬಿಸಿಯೂಟದ ಸಹಾಯಕ ನಿರ್ದೇಶಕ ಮೌನೇಶ ಕಂಬಾರ ಹೇಳಿದರು.

ಸರಕಾರಿ ಪ್ರೌಢಶಾಲೆ ತಿಂಥಣಿ, ಸರಕಾರಿ ಪ್ರೌಢ ಶಾಲೆ ದೇವಪುರ್, ಸರಕಾರಿ ಪ್ರೌಢ ಶಾಲೆ ಬೆನಕನಹಳ್ಳಿ ಬಲಶೆಟ್ಟಿಹಾಳ ಗೆದ್ದಲಮರಿ ದೇವತ್ಕಲ್ ಹಾಗೂ ತಾಲೂಕಿನ ಎಲ್ಲಾ ಕ್ವಾರಂಟೈನ ಕೇಂದ್ರಿತ ಶಾಲೆಗಳಲ್ಲಿ ಈ ಕಾರ್ಯಕ್ರಮ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಶಾಲೆಗಳ ಮುಖ್ಯಗುರುಗಳು, ಶಾಲೆ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ABOUT THE AUTHOR

...view details