ಕರ್ನಾಟಕ

karnataka

ETV Bharat / state

50 ಬಡ ಮಕ್ಕಳಿಗೆ ಉಚಿತ ಶಿಕ್ಷಣ: ಈ ಶಿಕ್ಷಕನ ಕಾರ್ಯ ಶ್ಲಾಘಿಸುವಂತಹುದು! - Asare foundation

ಸುರಪುರ ತಾಲೂಕಿನ ಕವಡಿಮಟ್ಟಿ ಗ್ರಾಮದ ಬಳಿಯಲ್ಲಿನ ವಿದ್ಯಾಭಾರತಿ ಶಾಲೆಯಲ್ಲಿ ಅನಾಥ ಹಾಗೂ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಅಲ್ಲದೆ, ಅವರ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ಬಹಿಸಿಕೊಂಡು ಹೋಗುತ್ತಿದೆ ವಿದ್ಯಾಭಾರತಿ ಗ್ರಾಮೀಣ ಮತ್ತು ಶಿಕ್ಷಣ ಅಭಿವೃದ್ಧಿ ಸಂಸ್ಥೆ.

ಶಿಕ್ಷಕನ ಕಾರ್ಯಕ್ಕೆ ಎಲ್ಲರ ಮೆಚ್ಚುಗೆ
ಶಿಕ್ಷಕನ ಕಾರ್ಯಕ್ಕೆ ಎಲ್ಲರ ಮೆಚ್ಚುಗೆ

By

Published : Sep 9, 2020, 2:43 AM IST

ಸುರಪುರ(ಯಾದಗಿರಿ) :ವಿದ್ಯಾಭಾರತಿ ಗ್ರಾಮೀಣ ಮತ್ತು ಶಿಕ್ಷಣ ಅಭಿವೃದ್ಧಿ ಸಂಸ್ಥೆ ಎಂಬ ಹೆಸರಲ್ಲಿ ಸಂಸ್ಥೆಯೊಂದನ್ನು ತೆರೆದು,ಸಂಸ್ಥೆಯ ಅಡಿಯಲ್ಲಿ ಶಾಲೆ ಆರಂಭಿಸಿರುವ ಈ ಶಿಕ್ಷಕ 50 ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸುರಪುರ ತಾಲೂಕಿನ ಕವಡಿಮಟ್ಟಿ ಗ್ರಾಮದ ಬಳಿಯಲ್ಲಿ ವಿದ್ಯಾಭಾರತಿ ಶಾಲೆ ಆರಂಭಿಸಿ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಬಡ ಕುಟುಂಬದ ಮಕ್ಕಳನ್ನು ಕರೆತಂದು ಉಚಿತ ಶಿಕ್ಷಣ ನೀಡುವ ಮೂಲಕ ಶಾಲಾ ಮಂಡಳಿ ವಿಶ್ವ ಸಾಕ್ಷರ ದಿನಕ್ಕೆ ಅರ್ಥ ತುಂಬಿದ್ದಾರೆ.

50 ಬಡ ಮಕ್ಕಳಿಗೆ ಉಚಿತ ಶಿಕ್ಷಣ

ಕೇವಲ ಶಾಲೆ ಮಾತ್ರವಲ್ಲದೆ ಆಸರೆ ಎಂಬ ಹೆಸರಲ್ಲಿ ಅನಾಥಾಶ್ರಮವೊಂದನ್ನು ಆರಂಭಿಸಿ ಸುಮಾರು 11 ಮಕ್ಕಳಿಗೆ ಅನಾಥಾಶ್ರಮದಲ್ಲಿ ಆಶ್ರಯ ನೀಡಿ ಎಲ್ಲಾ ಮಕ್ಕಳಿಗೆ ಊಟ, ವಸತಿ, ಶಿಕ್ಷಣ ನೀಡುತ್ತಿದ್ದಾರೆ.

ABOUT THE AUTHOR

...view details