ಯಾದಗಿರಿ:ಅಕ್ಷರದ ಅವ್ವ ಸಾವಿತ್ರಿ ಬಾಯಿ ಪುಲೆ.. ಆ ತಾಯಿಯ ಪ್ರತಿರೂಪದಂತಿದಾರೆ ಇವರು. ಈ ಹಳ್ಳಿಗೇ ಇವರು ಕೂಡ ಅಕ್ಷರದವ್ವನಂತೆ. ಹೆಸರು ಪದ್ಮಲತಾ. ಯಾದಗಿರಿ ಜಿಲ್ಲೆ ಹೇಳಿಕೇಳಿ ಗಡಿ ಪ್ರದೇಶ. ಇಲ್ಲಿನ ವಡಗೇರಾ ತಾಲೂಕಿನ ಕೊಂಕಲ್ ಪ್ರೌಢ ಶಾಲೆಗೆ 2004ರಲ್ಲಿ ಇವರು ಶಿಕ್ಷಕಿಯಾಗಿ ನೇಮಕವಾದಾಗ. ಈ ಹಳ್ಳಿ ಇಂಥ ಶೈಕ್ಷಣಿಕ ವಾತಾವರಣ ಹೊಂದಿರಲಿಲ್ಲ. ಬಾಲಕಿಯರು ಶಾಲೆ ಮೆಟ್ಟಿಲು ತುಳಿಯಲು ಹಿಂದೇಟು ಹಾಕ್ತಾಯಿದ್ದರು.
ಆದರೆ, 16 ವರ್ಷದಿಂದ ಇಲ್ಲಿ ತಮ್ಮ ಸೇವೆ ಸಲ್ಲಿಸುತ್ತಿರುವ ಈ ಮೇಡಂ, ಹಳ್ಳಿ ಬಾಲಕಿಯರು ಮತ್ತು ಅವರ ಪೋಷಕರ ಮನಸ್ಥಿತಿಯನ್ನೇ ಬದಲಿಸಿದ್ದಾರೆ. ಇದೇ ಹಳ್ಳಿಯ ಬಾಡಿಗೆ ಮನೆಯಲ್ಲಿದ್ಕೊಂಡೇ ಹೆಚ್ಚು ಹೆಚ್ಚು ಬಾಲಕಿಯರು ಶಾಲೆಗೆ ಬರುವಂತೆ ಮತ್ತು ಅವರ ಬದುಕಿನಲ್ಲಿ ಸುಶಿಕ್ಷಿತರಾಗುವಂತೆ ಮಾಡುವಲ್ಲಿ ಇವರ ಪಾತ್ರ ಹಿರಿದು. ಅದಕ್ಕೆ ಈಗ ಶಾಲೆಯಲ್ಲಿ ಬಾಲಕಿಯ ಹಾಜರಾತಿಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.