ಸುರಪುರ:ಕರ್ನಾಟಕ ಪ್ರದೇಶ ಕುರುಬರ ಸಂಘದ ಹುಣಸಗಿ ತಾಲೂಕು ಅಧ್ಯಕ್ಷ ಪರಶುರಾಮ ಚೌದ್ರಿ ತಮ್ಮ ಜನ್ಮದಿನದ ಅಂಗವಾಗಿ ಭಾರತೀಯ ಸೇನೆಗೆ 10 ಸಾವಿರ ರೂ. ನೀಡಿದ್ದಾರೆ. ಈ ಮೂಲಕ ತಮ್ಮ ಬರ್ತಡೇಯನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.
ಜನ್ಮ ದಿನದಂದು ಸೇನೆಗೆ 10,000 ರೂ. ದೇಣಿಗೆ: ದೇಶಪ್ರೇಮ ಮೆರೆದ ಕುರುಬ ಸಂಘದ ಅಧ್ಯಕ್ಷ - latest news for surapur
ಕರ್ನಾಟಕ ಪ್ರದೇಶ ಕುರುಬರ ಸಂಘದ ಹುಣಸಗಿ ತಾಲೂಕು ಅಧ್ಯಕ್ಷ ಪರಶುರಾಮ ಚೌದ್ರಿ ಜನ್ಮ ದಿನದ ಅಂಗವಾಗಿ ಅವರ ಅಭಿಮಾನಿಗಳು ಮತ್ತು ಗೆಳೆಯರ ಬಳಗದ ಸದಸ್ಯರು ದೇಶಪ್ರೇಮ ಮೆರೆದಿದ್ದಾರೆ. ಭಾರತೀಯ ಸೇನಾ ನಿಧಿಗೆ 10,000 ರೂ. ದೇಣಿಗೆಯನ್ನು ಹುಣಸಿಗಿ ತಹಶೀಲ್ದಾರ್ ವಿನಯಕುಮಾರ್ ಪಾಟೀಲ್ ಅವರ ಮೂಲಕ ಸಲ್ಲಿಸಿದರು.
ದೇಶಪ್ರೇಮ ಮೆರೆದ ಕುರುಬ ಸಂಘದ ಅಧ್ಯಕ್ಷ
ಪರುಶರಾಮ ಚೌದ್ರಿ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು ಮತ್ತು ಗೆಳೆಯರ ಬಳಗದ ಸೇರಿ ಭಾರತೀಯ ಸೇನಾ ನಿಧಿಗೆ 10,000 ರೂ. ದೇಣಿಗೆಯನ್ನು ಹುಣಸಿಗಿ ತಹಶೀಲ್ದಾರ್ ವಿನಯಕುಮಾರ್ ಪಾಟೀಲ್ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ವಿನಯ್ ಕುಮಾರ್ ಪಾಟೀಲ್ ಮಾತನಾಡಿ, ರೈತರು ಮತ್ತು ಯೋಧರು ನಮ್ಮ ದೇಶದ ಎರಡು ಕಣ್ಣುಗಳಿದ್ದಂತೆ. ಇವರನ್ನು ದೇಶದ ಪ್ರತಿಯೊಬ್ಬರು ಗೌರವಿಸಬೇಕು. ಆಗ ಮಾತ್ರ ದೇಶದ ಸಂಸ್ಕೃತಿಯನ್ನು ಗೌರವಿಸಿದಂತಾಗುತ್ತದೆ ಎಂದರು.