ಯಾದಗಿರಿ: ಜಮೀನಿನಲ್ಲಿ ಪಂಪ್ ಸೆಟ್ ಕೆಲಸ ಮಾಡುತ್ತಿರುವಾಗ ಭೀಮಾ ನದಿಯಲ್ಲಿ ವ್ಯಕ್ತಿವೋರ್ವ ಕೊಚ್ಚಿ ಹೋಗಿರುವ ಘಟನೆ ಯಾದಗಿರಿ ತಾಲೂಕಿನ ಕೌಳೂರ ಗ್ರಾಮದಲ್ಲಿ ನಡೆದಿದೆ.
ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಾಗಿರುವುದರಿಂದ ಉಜನಿ ಹಾಗೂ ವೀರಾ ಜಲಾಶಯದಿಂದ ಭೀಮಾ ನದಿಗೆ ನೀರು ಹರಿಬಿಡಲಾಗಿದೆ. ಹೀಗಾಗಿ ಭೀಮೆಯ ಒಡಲಲ್ಲಿರುವ ತಾಲೂಕಿನ ಕೌಳೂರ ಗ್ರಾಮದ ಜಮೀನಿನಲ್ಲಿ ಪಂಪ ಸೆಟ್ ಕೆಲಸ ಮಾಡುತ್ತಿರುವಾಗ ಭೀಮೆಯ ಆರ್ಭಟದಿಂದ ಓರ್ವ ವ್ಯಕ್ತಿ ಕೊಚ್ಚಿ ಹೋಗಿದ್ದಾನೆ.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಖುಷಿಕೇಶ ಭಗವಾನ್ ಹಾಗೂ ಜಿಲ್ಲಾ ದಂಡಾಧಿಕಾರಿ ಕೂರ್ಮರಾವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. .
ಉಗ್ರ ಸ್ವರೂಪ ತಾಳಿದ ಭೀಮೆ : ನದಿಯಲ್ಲಿ ಕೊಚ್ಚಿ ಹೋದ ವ್ಯಕ್ತಿ ಭೀಮ ನದಿಯಲ್ಲಿ ಕೊಚ್ಚಿ ಹೋದ ಘಟನೆ ಕೇಳುತ್ತಿದ್ದಂತೆ ಜಿಲ್ಲಾ ನ್ಯಾಯಾಧೀಶರು ಹಾಗೂ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಶಾಸಕ ನಾಗಣ್ಣಗೌಡ ಕಂದಕೂರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಯಿಸಿ, ಕೊಚ್ಚಿ ಹೋಗಿರುವ ವ್ಯಕ್ತಿ ಹುಡುಕಾಟದಲ್ಲಿ ತೊಡಗಿದ್ದಾರೆ. ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.