ಕರ್ನಾಟಕ

karnataka

ETV Bharat / state

ತನ್ನ ಪತ್ನಿಗೆ ಕಾಟ ಕೊಡುತ್ತಿದ್ದ ಗೆಳೆಯನ ಪ್ರಾಣವನ್ನೇ ತೆಗೆದ ಸ್ನೇಹಿತ! - ಯಾದಗಿರಿ ಲೇಟೆಸ್ಟ್​ ಕ್ರೈಮ್​

ತನ್ನ ಪತ್ನಿಗೆ ಕಾಟ ಕೊಡುತ್ತಿದ್ದ ಪಕ್ಕದ ಮನೆಯ ಗೆಳೆಯನನ್ನೇ ವ್ಯಕ್ತಿಯೊಬ್ಬ ಬರ್ಬರವಾಗಿ ಕೊಂದು ಹಾಕಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಈ ಕ್ರೈಮ್​ ಸ್ಟೋರಿ ಹಿಂದಿನ ಕಂಪ್ಲೀಟ್​ ಕಹಾನಿ ಇಲ್ಲಿದೆ...

man killed his friend, man killed his friend in Yadagiri, Yadagiri man killed his friend, Yadagiri man killed his friend news, ಸ್ನೇಹಿತನನ್ನು ಕೊಲೆ ಮಾಡಿದ ವ್ಯಕ್ತಿ, ಯಾದಗಿರಿಯಲ್ಲಿ ಸ್ನೇಹಿತನನ್ನು ಕೊಲೆ ಮಾಡಿದ ವ್ಯಕ್ತಿ, ಯಾದಗಿರಿ ಅಪರಾಧ ಸುದ್ದಿ,
ಪತ್ನಿಗೆ ಕಾಟ ಕೊಡುತ್ತಿದ್ದ ಪಕ್ಕದ್ಮನೆ ಗೆಳೆಯನನ್ನೇ ಕೊಡಲಿಯಿಂದ ಕೊಚ್ಚಿದ ಗಂಡ

By

Published : Jul 3, 2020, 6:19 PM IST

ಸುರಪುರ (ಯಾದಗಿರಿ): ತನ್ನ ಹೆಂಡ್ತಿಗೆ ಕಾಟ ಕೊಡ್ತಿದ್ದ ಬಾಲ್ಯದ ಸ್ನೇಹಿತನನ್ನು ವ್ಯಕ್ತಿಯೋರ್ವ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಿಕೇರಾ ಗ್ರಾಮದಲ್ಲಿ ನಡೆದಿದೆ.

ಹೌದು, ದೇವಿಕೇರಾ ಗ್ರಾಮದ ಇಬ್ಬರು ಗೆಳೆಯರಾದ ಯಂಕಪ್ಪ ಬೇವಿನಗಿಡದ ಮತ್ತು ಶಿವಪ್ಪ ಕೋಡಬೊವಿ ಇಬ್ಬರು ಚಿಕ್ಕಂದಿನಿಂದಲೂ ಸ್ನೇಹಿತರು. ಆದ್ರೆ ದ್ವೇಷ ಈ ಇಬ್ಬರ ಸ್ನೇಹಕ್ಕೆ ಎಳ್ಳುನೀರು ಬಿಟ್ಟಿದೆ. ಘಟನೆ ಜೂನ್ 30ರ ರಾತ್ರಿ ನಡೆದಿದೆ.

ಪತ್ನಿಗೆ ಕಾಟ ಕೊಡುತ್ತಿದ್ದ ಪಕ್ಕದ್ಮನೆ ಗೆಳೆಯನನ್ನೇ ಕೊಡಲಿಯಿಂದ ಕೊಚ್ಚಿದ ಗಂಡ

ಯಂಕಪ್ಪ ಬೇವಿನಗಿಡ ಸಮುದಾಯದ ಮುಖಂಡನಾಗುವತ್ತ ಸಣ್ಣ ಪುಟ್ಟ ಕೆಲಸಗಳ ಮಾಡಿಕೊಂಡಿದ್ದವನು. ಮತ್ತೋರ್ವ ವ್ಯಕ್ತಿ ಶಿವಪ್ಪ ಕೋಡಬೊವಿ ದೇವಿಕೇರಾ ಗ್ರಾಮದಲ್ಲಿ ಪಂಚರ್ ಅಂಗಡಿ ಇಟ್ಟುಕೊಂಡಿದ್ದ. ಇಬ್ಬರು ಅಕ್ಕ-ಪಕ್ಕದ ಮನೆಯವರು. ಯಂಕಪ್ಪ ಶಿವಪ್ಪನ ಹೆಂಡತಿಗೆ ಕಾಡಿಸುತ್ತಿದ್ದ ಎಂಬುದು ಶಿವಪ್ಪನ ಆರೋಪವಾಗಿತ್ತು. ಅಲ್ಲದೆ ಯಂಕಪ್ಪನಿಗೆ ಇದೇ ವಿಷಯದ ಕುರಿತು ಎರಡ್ಮೂರು ಬಾರಿ ಶಿವಪ್ಪ ವಾರ್ನ್ ಸಹ ಮಾಡಿದ್ದ.

ತನ್ನ ಹೆಂಡತಿಗೆ ಕಾಡಿಸುತ್ತಿದ್ದಾನೆ ಎಂಬುದಕ್ಕೆ ಯಂಕಪ್ಪನ ಮೇಲೆ ದ್ವೇಷ ಒಳಗೊಳಗೆ ಕುದಿಯುತ್ತಿದ್ದ ಶಿವಪ್ಪ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದ. ಅಲ್ಲದೆ ಅದಕ್ಕೆ ದಿನವನ್ನೂ ನಿಗದಿಪಡಿಸಿಕೊಂಡಂತೆ ಕಳೆದ ಮಂಗಳವಾರ ಸಂಜೆ ತನ್ನ ಹೆಂಡತಿಯನ್ನು ಅವರ ಊರಿಗೆ ಕಳುಹಿಸಿದ್ದ ಶಿವಪ್ಪ ಯಂಕಪ್ಪನ ಮೇಲೆ ಹಗೆ ಸಾಧಿಸುವುದಾಗಿ ಹೇಳಿಕೊಂಡಿದ್ದ.

ಇದನ್ನು ತಿಳಿದ ಶಿವಪ್ಪನ ಸಂಬಂಧಿಕರು ಅದೆಲ್ಲ ಏನು ಬೇಡ ಸುಮ್ಮನಿರುವಂತೆ ಹೇಳಿದ್ದರು. ಆದರೂ ಸುಮ್ಮನಿರದ ಶಿವಪ್ಪ ಮಂಗಳವಾರ ರಾತ್ರಿ 1:30 ಸುಮಾರಿಗೆ ಕೊಡಲಿ ತೆಗೆದುಕೊಂಡು ಪಕ್ಕದ ಮನೆಯ ಮಾಳಿಗೆ ಮೇಲೆ ಮಲಗಿದ್ದ ಯಂಕಪ್ಪನನ್ನು ಕೊಚ್ಚಿ ಕೊಲೆ ಮಾಡಿಯೇಬಿಟ್ಟಿದ್ದಾನೆ.

ಯಂಕಪ್ಪನ ಪಕ್ಕದಲ್ಲಿಯೇ ಮಲಗಿದ್ದ ಆತನ ಪತ್ನಿ ಗೌರಮ್ಮ ಕೂಗಿಕೊಂಡಿದ್ದಾಳೆ. ಶಿವಪ್ಪನನ್ನು ಕೊಲೆ ಮಾಡಿ ಶಿವಪ್ಪ ಕೊಡಲಿ ಸಮೇತ ಕಾಲ್ಕಿತ್ತಿದ್ದಾನೆ. ಈ ಸುದ್ದಿ ತಿಳಿದು ಪೊಲೀಸ್​ ಇನ್ಸ್​ಪೆಕ್ಟರ್​ ಎಸ್.ಎಂ. ಪಾಟೀಲ್ ತಂಡ ಶಿವಪ್ಪನನ್ನು ಬಂಧಿಸಿದ್ದಾರೆ.

ಈಗ ಪಕ್ಕದ ಮನೆಯ ಗೆಳೆಯನನ್ನು ಕೊಂದು ಕೊಲೆಗಾರನ ಪಟ್ಟದೊಂದಿಗೆ ಆರೋಪಿ ಎನಿಸಿಕೊಂಡ ಶಿವಪ್ಪ ಕೋಡಬೊವಿ ಜೈಲು ಸೇರಿದ್ದಾನೆ. ಅತ್ತ ಕೊಲೆಗೀಡಾದ ಯಂಕಪ್ಪ ಕುಟುಂಬ ಮತ್ತು ಇತ್ತ ಕೊಲೆಗೈದ ಶಿವಪ್ಪ ಕೋಡಬೊವಿ ಕುಟುಂಬಗಳೆರಡೂ ಕಣ್ಣೀರಲ್ಲಿ ಮುಳುಗಿವೆ.

ABOUT THE AUTHOR

...view details