ಸುರಪುರ:ಇಂದು ರಾಜ್ಯದಲ್ಲಿ ತನ್ನ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ನಿರ್ಮೂಲನೆಗಾಗಿ ರಾಜ್ಯ ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ.ಇದಕ್ಕೆ ಎಲ್ಲರೂ ನೆರವಾಗುವ ಅವಶ್ಯವಿದೆ ಎಂದು ಶಾಸಕ ನರಸಿಂಹ ನಾಯಕ ರಾಜುಗೌಡ ತಿಳಿಸಿದರು.
ಸುರಪುರ: ಸಿಎಂ ಕೊರೊನಾ ಪರಿಹಾರ ನಿಧಿಗೆ 50 ಸಾವಿರ ದೇಣಿಗೆ - ಸಿಎಂ ಕೊರೊನಾ ಪರಿಹಾರ ನಿಧಿ
ರಾಜ್ಯದ ಪ್ರತಿಯೊಬ್ಬರು ನೆರವಿನ ಹಸ್ತ ಚಾಚುವ ಮೂಲಕ ಕೊರೊನಾ ನಿರ್ಮೂಲನೆಗೆ ಸರ್ಕಾರದೊಂದಿಗೆ ಕೈ ಜೋಡಿಸೋಣ ಎಂದು ಮುಖಂಡ ಭೀಮಣ್ಣ ಬೇವಿನಾಳ ಕರೆ ನೀಡಿದರು.
ಸಿಎಂ ಕೊರೊನಾ ಪರಿಹಾರ ನಿಧಿಗೆ 50 ಸಾವಿರ ದೇಣಿಗೆ
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಕೊರೊನಾ ಪರಿಹಾರ ನಿಧಿಗೆ ವೈಯಕ್ತಿಕವಾಗಿ 50 ಸಾವಿರ ರೂ. ದೇಣಿಗೆ ನೀಡಿದ ಮುಖಂಡ ಭೀಮಣ್ಣ ಬೇವಿನಾಳ ಮಾತನಾಡಿ, ರಾಜ್ಯದ ಪ್ರತಿಯೊಬ್ಬರು ನೆರವಿನ ಹಸ್ತ ಚಾಚುವ ಮೂಲಕ ಕೊರೊನಾ ನಿರ್ಮೂಲನೆಗೆ ಸರ್ಕಾರದೊಂದಿಗೆ ಕೈ ಜೋಡಿಸೋಣ ಎಂದರು.
ದೇಣಿಗೆಯ ಚೆಕ್ ಸ್ವೀಕರಿಸಿದ ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ಮುಖ್ಯಮಂತ್ರಿಗಳಿಗೆ ಹಣವನ್ನು ಕಳುಹಿಸಿಕೊಡುವುದಾಗಿ ತಿಳಿಸಿದರು. ಅಶೋಕ ಸುರಪುರಕರ್ ಸೋಮರಡ್ಡಿ ಮಂಗಿಹಾಳ ಶರಣು ನಾಯಕ ಡೊಣ್ಣಿಗೇರಾ, ಶರಣು ದೀವಳಗುಡ್ಡ ಇತರರಿದ್ದರು.