ಯಾದಗಿರಿ:ಶಹಾಪುರ ತಾಲೂಕಿನಲ್ಲಿ ಮಳೆಯಿಂದಾಗಿ ತುಂಬಿರುವ ಕೆರೆ ನೋಡಲು ಹೋದ ಯುವಕ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಶಹಾಪುರ ಠಾಣೆ ವ್ಯಾಪ್ತಿಯ ಚರಬಸವೇಶ್ವರ ಗದ್ದಗಿ ಬಳಿ ನಡೆದಿದೆ.
ಆಸರಮೊಹಲ್ಲಾದ ಖಲೀಮ್ (23) ಮೃತ ಯುವಕ. ಜಿಲ್ಲೆಯಾದ್ಯಂತ ಬಾರಿ ಮಳೆಯಾಗಿದ್ದ ಹಿನ್ನೆಲೆ ತಾಲೂಕಿನ ನಾಗರಕೆರೆ ತುಂಬಿದ್ದು, ಇದನ್ನು ನೋಡಲು ತೆರಳಿದ ಖಲೀಮ್ ಕಾಲು ಜಾರಿ ಕೆರೆಗೆ ಬಿದಿದ್ದು, ಈಜು ಬಾರದ ಹಿನ್ನೆಲೆ ನೀರಿನಲ್ಲಿ ಸಿಲುಕಿ ಮೃತ ಪಟ್ಟಿರುವುದಾಗಿ ಎಸ್ಪಿ ಡಾ. ಸಿ.ಬಿ. ವೇದಮೂರ್ತಿ ತಿಳಿಸಿದ್ದಾರೆ. ಅಗ್ನಿಶಾಮಕ ದಳದ ಸಹಾಯದಿಂದ ಮೃತದೇಹವನ್ನು ಹೊರತೆಗೆಯಲಾಗಿದ್ದು, ಶಹಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.