ಸುರಪುರ: ತಾಲೂಕಿನ ಕೆಂಭಾವಿ ನಗರದ ಸಂಜಯನಗರ ಕ್ರಾಸ್ ನಲ್ಲಿರುವ ಬಸವಸಾಗರ ಜಲಾಶಯದ ಎಡದಂಡೆ ಮೇನ್ ಕಾಲುವೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿಯೋರ್ವರು ಸಾವಿಗೀಡಾಗಿದ್ದಾರೆ.
ಆಕಸ್ಮಿಕವಾಗಿ ಕಾಲು ಜಾರಿ ಕಾಲುವೆಗೆ ಬಿದ್ದು ವ್ಯಕ್ತಿ ಸಾವು - A man accidentally died after fell into channel in surapura
ಮೃತ ಮಲ್ಲನಗೌಡ ಕೆಂಭಾವಿ ಪ್ರಮುಖ ಕಾಲುವೆಯಲ್ಲಿ ಗುರುವಾರ ಸಾಯಂಕಾಲ ಸಮಯದಲ್ಲಿ ಬಹಿರ್ದೆಸೆಗೆ ಹೋಗಿದ್ದ ವೇಳೆ ಈ ಅನಾಹುತ ಸಂಭವಿಸಿದೆ.
![ಆಕಸ್ಮಿಕವಾಗಿ ಕಾಲು ಜಾರಿ ಕಾಲುವೆಗೆ ಬಿದ್ದು ವ್ಯಕ್ತಿ ಸಾವು A man accidentally died after fell into channel in surapura](https://etvbharatimages.akamaized.net/etvbharat/prod-images/768-512-10986837-thumbnail-3x2-nin.jpg)
ಆಕಸ್ಮಿಕವಾಗಿ ಕಾಲು ಜಾರಿ ಕಾಲುವೆಗೆ ಬಿದ್ದು ವ್ಯಕ್ತಿ ಸಾವು
ಕೆಂಭಾವಿ ಪಟ್ಟಣದ ಮಲ್ಲನಗೌಡ (32 ವರ್ಷ) ವ್ಯಕ್ತಿ ಮೃತರು. ಈತ ಸ್ಥಳಿಯ ಹೇಮರೆಡ್ಡಿ ಮಲ್ಲಮ್ಮ ಸಹಕಾರಿ ಬ್ಯಾಂಕ್ ನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಮೃತ ಮಲ್ಲನಗೌಡ ಕೆಂಭಾವಿ ಪ್ರಮುಖ ಕಾಲುವೆಯಲ್ಲಿ ಗುರುವಾರ ಸಾಯಂಕಾಲ ಸಮಯದಲ್ಲಿ ಬಹಿರ್ದೆಸೆಗೆ ಹೋಗಿದ್ದ ವೇಳೆ ಈ ಅನಾಹುತ ಸಂಭವಿಸಿದೆ.
ಸ್ಥಳಿಯರು ಶವವನ್ನು ನೋಡಿ ಹೊರತೆಗೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
TAGGED:
ಸುರಪುರ