ಯಾದಗಿರಿ : ಜಿಲ್ಲೆಯಲ್ಲಿಂದು ಕೊರೊನಾ ವೈರಸ್ ಸುನಾಮಿಯಂತೆ ಅಪ್ಪಳಿಸಿದೆ. ಒಂದೇ ದಿನ 61 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖೈ 642 ಕ್ಕೆ ಏರಿಕೆಯಾಗಿದೆ.
ಗಡಿ ಜಿಲ್ಲೆಯಲ್ಲಿ ಮುಂಬೈ ಮಾರಿ ಅಬ್ಬರ.. ಇಂದು ಒಂದೇ ದಿನ 61 ಕೇಸ್ ಪತ್ತೆ.. - corona update
ಸೋಂಕು ಪತ್ತೆಯಾದ ಎಲ್ಲರನ್ನೂ ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಡಳಿತದ ಯಡವಟ್ಟಿನಿಂದ ಹೋಮ್ ಕ್ವಾರಂಟೈನ್‌ನಲ್ಲಿದ್ದ ಸೋಂಕಿತರು ನಗರದ ಹಲವೆಡೆ ತಿರುಗಾಡುವ ಮೂಲಕ ಕೊರೊನಾ ಆತಂಕ ಸೃಷ್ಟಿಸಿದ್ದಾರೆ.

ಮಹಾರಾಷ್ಟ್ರದಿಂದ ಆಗಮಿಸಿದ 59 ಜನರಲ್ಲಿ ಹಾಗೂ ಗುಜರಾತ್ನಿಂದ ಬಂದ 20 ವರ್ಷದ ಯುವತಿಗೆ ಸೋಂಕು ದೃಢಪಟ್ಟಿದೆ. ಬೇರೆ ರಾಜ್ಯಗಳಿಂದ ಆಗಮಿಸಿದ ಇವರನ್ನೆಲ್ಲ ಸ್ಕ್ರೀನಿಂಗ್ ಟೆಸ್ಟ್ ಬಳಿಕ ಜಿಲ್ಲೆಯ ವಿವಿಧೆಡೆ ಸಾಂಸ್ಥಿಕ ಕ್ವಾರೆಂಟೈನ್ನಲ್ಲಿ ಇರಿಸಲಾಗಿತ್ತು. ಸಾಂಸ್ಥಿಕ ಕ್ವಾರೆಂಟೈನ್ನಲ್ಲಿದ್ದ ಕೆಲವರನ್ನು ಸ್ಯಾಬ್ ವರದಿ ಬರುವ ಮುಂಚೆಯೇ ಜಿಲ್ಲಾಡಳಿತ ಹೋಮ್ ಕ್ವಾರೆಂಟೈನ್ಗೆ ಕಳುಹಿಸಿತ್ತು.
ಸೋಂಕು ಪತ್ತೆಯಾದ ಎಲ್ಲರನ್ನೂ ಈಗ ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಡಳಿತದ ಯಡವಟ್ಟಿನಿಂದ ಹೋಮ್ ಕ್ವಾರಂಟೈನ್‌ನಲ್ಲಿದ್ದ ಸೋಂಕಿತರು ನಗರದ ಹಲವೆಡೆ ತಿರುಗಾಡುವ ಮೂಲಕ ಕೊರೊನಾ ಆತಂಕ ಸೃಷ್ಟಿಸಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.