ಕರ್ನಾಟಕ

karnataka

ETV Bharat / state

ಶಬರಿಮಲೆಗೆ ತೆರಳಲು 57 ಜನರಿಂದ ಮಾಲಾಧಾರಣೆ.. - ಕೊಪ್ಪಳ ಸುದ್ದಿ

ಕೇರಳದ ಪ್ರಸಿದ್ಧ ತೀರ್ಥ ಕ್ಷೇತ್ರ ಹಾಗೂ ಧಾರ್ಮಿಕ ಸ್ಥಳವಾದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ತೆರಳಲು ಹರಕೆ ಹೊತ್ತ 57 ಭಕ್ತರು ವಿದ್ಯಾನಗರದಲ್ಲಿ ಶಾಸ್ತ್ರೋಕ್ತವಾಗಿ ಮಾಲಾಧಾರಣೆ ಮಾಡಿದರು.

ಶಬರಿಮಲೆಗೆ ತೆರಳಲು 57 ಜನರಿಂದ ಮಾಲಾಧಾರಣೆ

By

Published : Nov 17, 2019, 6:38 PM IST


ಗಂಗಾವತಿ: ಕೇರಳದ ಪ್ರಸಿದ್ಧ ತೀರ್ಥ ಕ್ಷೇತ್ರ ಹಾಗೂ ಧಾರ್ಮಿಕ ಸ್ಥಳವಾದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ತೆರಳಲು ಹರಕೆ ಹೊತ್ತ 57 ಭಕ್ತರು ವಿದ್ಯಾನಗರದಲ್ಲಿ ಶಾಸ್ತ್ರೋಕ್ತವಾಗಿ ಮಾಲಾಧಾರಣೆ ಮಾಡಿದರು.

ಶಬರಿಮಲೆಗೆ ತೆರಳಲು 57 ಭಕ್ತರಿಂದ ಮಾಲಾಧಾರಣೆ..

ಶಿವದಾಸ್​ ಗುರುಗಳ ನೇತೃತ್ವದಲ್ಲಿ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ 57 ಜನ ಮಾಲಾಧರಣೆ ಮಾಡಿದರು. ಸಂಕ್ರಾಂತಿಯವರೆಗೆ ಮಾಲಾಧಾರಿಗಳು ವ್ರತ ಆಚರಿಸಲಿದ್ದು ಬಳಿಕ ಮಕರಜ್ಯೋತಿ ದರ್ಶನಕ್ಕೆ ತೆರಳಲಿದ್ದಾರೆ.

ಈ ಬಗ್ಗೆ ಮಾತನಾಡಿದ ಅಯ್ಯಪ್ಪ ಸ್ವಾಮಿ ಭಕ್ತ ವೆಂಕಟೇಶ, ತಮ್ಮ ಗುರುಗಳಾದ ಶಿವದಾಸ್​ ಗುರುಗಳು ವರ್ಷಕ್ಕೆ ಎರಡರಿಂದ ಮೂರು ಬಾರಿಯಂತೆ ಈವರೆಗೂ 109 ಬಾರಿ ಅಯ್ಯಪ್ಪನ ದರ್ಶನ ಮಾಡಿದ್ದಾರೆ. 59 ವರ್ಷದಿಂದ ನಿರಂತರವಾಗಿ ಜ್ಯೋತಿ ದರ್ಶನ ಮಾಡುತ್ತಿದ್ದಾರೆ ಎಂದರು.

ABOUT THE AUTHOR

...view details