ಯಾದಗಿರಿ: ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಮುಂದುವರೆದಿದ್ದು, ಕೊರೊನಾ ವಾರಿಯರ್ಸ್ಗಳಾದ 40 ಪೊಲೀಸರಿಗೆ ಸೋಂಕು ತಗುಲಿದೆ.
ಯಾದಗಿರಿಯಲ್ಲಿ 40 ಪೊಲೀಸ್ ಸಿಬ್ಬಂದಿಗೆ ಸೋಂಕು - Yadagiri corona news
ಯಾದಗಿರಿ ಜಿಲ್ಲೆಯಲ್ಲಿಂದು 40 ಪೊಲೀಸರಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ. ಈ ಕುರಿತು ಹೆಲ್ತ್ ಬುಲೆಟಿನ್ನಲ್ಲಿ ಅಧಿಕೃತವಾಗಿ ಪ್ರಕಟವಾಗಿದೆ.
ಯಾದಗಿರಿ
ಜಿಲ್ಲೆಯ ಶಹಾಪುರ, ಭೀಮರಾಯನಗುಡಿ, ಗುರಮಿಠಕಲ್ ಠಾಣೆಯ ಪೊಲೀಸರು ಸೇರಿದಂತೆ ಓರ್ವ ಪಿಎಸ್ಐ, ಇಬ್ಬರು ಸಿಪಿಐ, ಒರ್ವ ಪ್ರೊಬೇಷನರಿ ಪಿಎಸ್ಐ ಸೇರಿದಂತೆ ಒಟ್ಟು 40 ಜನರಿಗೆ ಸೋಂಕು ಕಂಡು ಬಂದಿದೆ.
ಜಿಲ್ಲೆಯಲ್ಲಿ ಬಹುಸಂಖ್ಯೆಯ ಪೊಲೀಸರಿಗೆ ಕೊರೊನಾ ಸೋಂಕು ತಗುಲಿರುವುದು ಇಂದಿನ ಹೆಲ್ತ್ ಬುಲೆಟಿನ್ನಲ್ಲಿ ಅಧಿಕೃತವಾಗಿ ಬಿಡುಗಡೆಗೊಂಡಿದೆ.