ಕರ್ನಾಟಕ

karnataka

ETV Bharat / state

ಇಂದು 37 ಮಂದಿಗೆ ಸೋಂಕು.. ಯಾದಗಿರಿಯೊಳಗೆ ಈವರೆಗೂ 467 ಮಂದಿ ಡಿಸ್ಚಾರ್ಜ್‌ - Yadagiri Corona Hospital

ಸೋಂಕಿತರ ಪೈಕಿ ಈವರೆಗೆ 467 ಮಂದಿ ಗುಣಮುಖಾರಾಗಿ ಬಿಡುಗಡೆಗೊಂಡಿದ್ರೆ, ಒಬ್ಬರು ಮಾತ್ರ ಮೃತಪಟ್ಟಿರುತ್ತಾರೆ. ಮಹಾರಾಷ್ಟ್ರದಿಂದ ಬಂದವರಿಂದಾಗಿ ಪಾಸಿಟಿವ್ ಪ್ರಕರಣ ಜಿಲ್ಲೆಯಲ್ಲಿ ಹೆಚ್ಚಿವೆ.

37 new corona positive reported in Yadigir today
ಯಾದಗಿರಿಯಲ್ಲಿ ಕೊರೊನಾ ‘ಮಹಾ’ ಆರ್ಭಟ: 37 ಜನರಿಗೆ ಸೋಂಕು ದೃಢ

By

Published : Jun 17, 2020, 9:25 PM IST

ಯಾದಗಿರಿ :ಜಿಲ್ಲೆಯಲ್ಲಿ ಇಂದು ಮತ್ತೆ ಮಹಾರಾಷ್ಟ್ರದಿಂದ ಬಂದ 37 ವಲಸಿಗರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 865ಕ್ಕೆ ಏರಿದೆ.

1-15 ವರ್ಷದ ಒಳಗಿನ 8 ಮಕ್ಕಳು ಸೇರಿ ಒಟ್ಟು 37 ಜನರಿಗೆ ಸೋಂಕು ತಗುಲಿದೆ. ಇತ್ತೀಚೆಗೆ ಮಹಾರಾಷ್ಟ್ರದಿಂದ ಆಗಮಿಸಿದ ಇವರನ್ನೆಲ್ಲ ಜಿಲ್ಲೆಯ ವಿವಿಧ ಕ್ವಾರಂಟೈನ್​ ಕೇಂದ್ರದಲ್ಲಿ ಇರಿಸಲಾಗಿತ್ತು. ಇಂದು ಇವರಲ್ಲಿ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆಗಾಗಿ ನಿಗದಿತ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಂಕಿತರ ಪೈಕಿ ಈವರೆಗೆ 467 ಮಂದಿ ಗುಣಮುಖಾರಾಗಿ ಬಿಡುಗಡೆಗೊಂಡಿದ್ರೆ, ಒಬ್ಬರು ಮಾತ್ರ ಮೃತಪಟ್ಟಿರುತ್ತಾರೆ. ಮಹಾರಾಷ್ಟ್ರದಿಂದ ಬಂದವರಿಂದಾಗಿ ಪಾಸಿಟಿವ್ ಪ್ರಕರಣ ಜಿಲ್ಲೆಯಲ್ಲಿ ಹೆಚ್ಚಿವೆ.

ABOUT THE AUTHOR

...view details