ಸುರಪುರ(ಯಾದಗಿರಿ):ನಗರದ ನಿಷ್ಠಿ ವಸತಿ ನಿಲಯದ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 33 ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸುರಪುರದಲ್ಲಿ 33 ಕೊರೊನಾ ಸೋಂಕಿತರು ಗುಣಮುಖ..ಆಸ್ಪತ್ರೆಯಿಂದ ಬಿಡುಗಡೆ - ಯಾದಗಿರಿ ಜಿಲ್ಲೆ ಸುರಪುರ ತಾಲೂಕು
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಿಷ್ಠಿ ವಸತಿ ನಿಲಯದ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 33 ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಸುರಪುರದಲ್ಲಿ 33 ಕೊರೊನಾ ಸೋಂಕಿತರು ಗುಣಮುಖ..ಆಸ್ಪತ್ರೆಯಿಂದ ಬಿಡುಗಡೆ
ಈ ಕುರಿತು ಮಾಹಿತಿ ನೀಡಿರುವ ತಾಲೂಕು ಆರೋಗ್ಯಾಧಿಕಾರಿ ಡಾಕ್ಟರ್ ಆರ್.ವಿ.ನಾಯಕ, ಆಸ್ಪತ್ರೆಯಲ್ಲಿದ್ದ 100 ಜನರಲ್ಲಿ ಈಗಾಗಲೇ 28 ಜನರನ್ನು ಎರಡು ದಿನಗಳ ಹಿಂದೆ ಬಿಡುಗಡೆ ಮಾಡಲಾಗಿತ್ತು.
ಇಂದು 33 ಜನರು ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮನೆಗೆ ಕಳುಹಿಸಲಾಗಿದೆ ಎಂದರು.