ಯಾದಗಿರಿ:ಯಾದಗಿರಿ ಜಿಲ್ಲೆಯಲ್ಲಿ ಗುರುವಾರ 66 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ನಿನ್ನೆ ಸುರಪುರದ ನಿಷ್ಠಿ ಕೋವಿಡ್-19 ಆಸ್ಪತ್ರೆಯಿಂದ ಗುಣಮುಖರಾದ 28 ಜನರನ್ನು ಡಿಸ್ಚಾರ್ಜ್ ಮಾಡಲಾಗಿದೆ.
ಸುರಪುರ ನಿಷ್ಠಿ ಕೋವಿಡ್-19 ಆಸ್ಪತ್ರೆಯಿಂದ 28 ಜನ ಡಿಸ್ಚಾರ್ಜ್ - ಸುರಪುರ ಕೋವಿಡ್-19 ಆಸ್ಪತ್ರೆ
ಕೊರೊನಾದಿಂದ ಸುರಪುರದ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 28 ಜನ ಗುಣಮುಖರಾಗಿದ್ದು, ನಿನ್ನೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
Surapura
ನಿನ್ನೆ ಸಂಜೆ ಕೊರೊನಾದಿಂದ ಗುಣಮುಖರಾದ 28 ಜನರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಇದರ ಮಧ್ಯೆ ಜಿಲ್ಲೆಯ 66 ಜನ ಸೋಂಕಿತರಲ್ಲಿ ಇಬ್ಬರು ಸೋಂಕಿತರಾದ P-6105 ಮತ್ತು P-6106 ಸುರಪುರದವರಾಗಿದ್ದಾರೆ.