ಕರ್ನಾಟಕ

karnataka

ETV Bharat / state

ಸಿಡಿಲಬ್ಬರ: ಸುರಪುರದಲ್ಲಿ 25 ಕುರಿಗಳ ದಾರುಣ ಸಾವು - ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸತ್ಯಂಪೇಟೆ ಗ್ರಾಮ

ಸಿಡಿಲು ಸಹಿತ ಮಳೆಗೆ 25 ಕುರಿಗಳ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸತ್ಯಂಪೇಟೆ ಗ್ರಾಮದಲ್ಲಿ ನಡೆದಿದೆ.

25 sheep died by Thunderbolt
ಸಿಡಿಲ ಬಡಿತಕ್ಕೆ 25 ಕುರಿ ಸಾವು

By

Published : Oct 11, 2020, 3:12 PM IST

ಸುರಪುರ : ಶನಿವಾರ ರಾತ್ರಿ ಸುರಿದ ಸಿಡಿಲು ಸಹಿತ ಜೋರು ಮಳೆಗೆ 25 ಕುರಿಗಳು ಸಾವನ್ನರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸತ್ಯಂಪೇಟೆ ಗ್ರಾಮದಲ್ಲಿ ನಡೆದಿದೆ.

ಸಿಡಿಲ ಬಡಿತಕ್ಕೆ 25 ಕುರಿ ಸಾವು

ಈ ಕುರಿಗಳು ಸಣ್ಣ ತಿಮ್ಮಣ್ಣ ಪುರ್ಲೆ ಎಂಬುವರಿಗೆ ಸೇರಿದ್ದು, ಕುರಿ ಮೇಯಿಸಲು ಗ್ರಾಮದ ಹೊರಭಾಗದಲ್ಲಿ ಕುರಿ ಹಟ್ಟಿ ಹಾಕಿದ್ದರು. ಈ ವೇಳೆ ಸಿಡಿಲು ಬಡಿದ ಹಿನ್ನೆಲೆ ಲಕ್ಷಾಂತರ ಬೆಲೆ ಬಾಳುವ ಕುರಿಗಳು ಮೃತಪಟ್ಟಿವೆ.

ಇನ್ನು ಹಟ್ಟಿಯ ಸಮೀಪಲ್ಲೇ ಇದ್ದ ಕುರಿಗಳ ಮಾಲೀಕನ ಮಗ ಸಣ್ಣನರಸಪ್ಪ ಅಪಾಯದಿಂದ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ಸುರಪುರ ಕಂದಾಯ ಇಲಾಖೆ ಅಧಿಕಾರಿಗಳು ಹಾಗು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details