ಕರ್ನಾಟಕ

karnataka

ETV Bharat / state

ಯಾದಗಿರಿ ಡಿಸಿ ವಿಳಾಸದಲ್ಲಿ 2 ನಕಲಿ ಇಮೇಲ್ ಐಡಿ ಸೃಷ್ಟಿ: ಪ್ರಕರಣ ದಾಖಲು - ಯಾದಗಿರಿ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ

ಯಾದಗಿರಿ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್. ಅವರ ಇ-ಮೇಲ್ ವಿಳಾಸ ಹೋಲುವ ಹಾಗೆ 2 ನಕಲಿ ಇಮೇಲ್ ಐಡಿ ಸೃಷ್ಟಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲಾಧಿಕಾರಿ ಇ-ಮೇಲ್ ಹೋಲುವ ಹಾಗೆ ಎರಡು ನಕಲಿ ಮೇಲ್ ಐಡಿಗಳನ್ನು ಸೃಷ್ಟಿಸಿ ವಿವಿಧ ಇಲಾಖೆ ಇ-ಮೇಲ್ ಐಡಿಗಳಿಗೆ ಅಧಿಕೃತವಾಗಿ ಮೇಲ್ ಮಾಡಿರುವುದು ಅಧಿಕಾರಿ ವಲಯವನ್ನು ತಲ್ಲಣಗೊಳಿಸಿದೆ.

yadgiri
ಯಾದಗಿರಿ

By

Published : Oct 29, 2020, 2:09 PM IST

ಯಾದಗಿರಿ: ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್. ಅವರ ಇ-ಮೇಲ್ ವಿಳಾಸ ಹೋಲುವ ಹಾಗೆ ನಕಲಿ ಇಮೇಲ್ ಐಡಿ ಸೃಷ್ಟಿಸಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕೃತ ಇಲಾಖಾ ಮೇಲ್ ವಿಳಾಸಗಳಿಗೆ ಇ-ಮೇಲ್ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇದು ಜಿಲ್ಲಾಡಳಿತದ ತಲೆನೋವಿಗೆ ಕಾರಣವಾಗಿದೆ.

ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್.

ಜಿಲ್ಲಾಧಿಕಾರಿ ಇ-ಮೇಲ್​​ಗೆ ಹೋಲುವ ಹಾಗೆ ಎರಡು ನಕಲಿ ಮೇಲ್ ಐಡಿಗಳನ್ನು ಸೃಷ್ಟಿಸಿ ವಿವಿಧ ಇಲಾಖೆ ಇಮೇಲ್ ಐಡಿಗಳಿಗೆ ಅಧಿಕೃತವಾಗಿ ಮೇಲ್ ಮಾಡಿರುವುದು ಅಧಿಕಾರಿ ವಲಯವನ್ನು ತಲ್ಲಣಗೊಳಿಸಿದೆ. ಅ. 9ರಂದು Chiefexecutive129@gmail.com ಹಾಗೂ ಅ. 26ರಂದು Chiefexecutive0024@gmil.com ಎಂಬ ಎರಡು ಮೇಲ್ ಐಡಿಗಳನ್ನ ಸೃಷ್ಟಿಸಿ ನಿಗೂಢವಾಗಿ ಜಿಲ್ಲೆಯ ವಿವಿಧ ಇಲಾಖಾ ಇ-ಮೇಲ್ ಐಡಿಗಳಿಗೆ ಮೇಲ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಇ-ಮೇಲ್ ಐಡಿ ಸೃಷ್ಟಿಸಿದವರು ಯಾರು?, ಯಾವ ಉದ್ದೇಶಕ್ಕಾಗಿ ಈ ರೀತಿ ಮಾಡಿದ್ದಾರೆ? ಅನ್ನೋದು ಮಾತ್ರ ತಿಳಿದು ಬಂದಿಲ್ಲ. ಈ ಕುರಿತು ಯಾದಗಿರಿ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಖ್ಯೆ 14/2020 ಕಲಂ 66 (ಡಿ) ಐಟಿ ಕಾಯ್ದೆ-2008ರಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದು, ನಕಲಿ ಮೇಲ್ ಐಡಿ ಸೃಷ್ಟಿಸಿದವರನ್ನ ಬಂಧಿಸಲು ಬಲೆ ಬೀಸಿದ್ದಾರೆ. ನಕಲಿ ಇ-ಮೇಲ್ ಐಡಿ ಸೃಷ್ಟಿಸಿದವರನ್ನ ಪತ್ತೆ ಹಚ್ಚುವುದು ವಿಳಂಬವಾದ್ರೆ ವ್ಯಾಪಕ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಪೊಲೀಸ್ ಇಲಾಖೆಗೆ ಇದು ಭಾರೀ ಸವಲಾಗಿ ಪರಿಣಮಿಸಿದೆ.

ನಕಲಿ ಇ-ಮೇಲ್ ಐಡಿ ಸೃಷ್ಟಿಸಿರುವ ಕುರಿತು ನಮಗೆ ನಮ್ಮ ಆಪ್ತ ಸಹಾಯಕ ಮಾಹಿತಿ ನೀಡಿದ್ದಾರೆ. ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಎಂ.ಕುರ್ಮಾರಾವ್ ಅವರು ಇದ್ದಾಗಲೂ ಈ ವಿಷಯ ಬೆಳಕಿಗೆ ಬಂದಿತ್ತು. ಆಗ ಅವರು ಮೌಖಿಕವಾಗಿ ಪೊಲೀಸ್​ ಇಲಾಖೆಗೆ ವಿಷಯ ತಿಳಿಸಿದ್ದರು. ಈಗ ನನ್ನ ಗಮನಕ್ಕೆ ಬಂದಿರುವ ಕಾರಣ ಈ ಕುರಿತು ಎಫ್ಐಆರ್ ದಾಖಲಿಸಲಾಗಿದೆ. ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ತನಿಖೆ ನಡೆಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ರಾಗಪ್ರಿಯ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details