ಯಾದಗಿರಿ: ಜಿಲ್ಲೆಯಲ್ಲಿ ನಿನ್ನೆ ಮತ್ತೆ ಕೊರೊನಾ ಮಹಾಸ್ಫೋಟವಾಗಿದ್ದು, ಒಂದೇ ದಿನದಲ್ಲಿ 162 ಜನರಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಸೋಂಕಿತರ ಸಂಖ್ಯೆ 1450ಕ್ಕೆ ಏರಿಕೆಯಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ ದಿನಕಳೆದಂತೆ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಜಿಲ್ಲೆಯ ಜನರನ್ನ ಬೆಚ್ಚಿ ಬೀಳಿಸುವಂತೆ ಮಾಡಿದೆ. ಸುನಾಮಿಯಂತೆ ಜಿಲ್ಲೆಯಲ್ಲಿ ಕೊರೊನಾ ವೈರಸ್ ಅಪ್ಪಳಿಸಿದೆ.
ಜಿಲ್ಲೆಯ 162 ಜನರಲ್ಲಿ ಮಹಾಮಾರಿ ವೈರಸ್ ಹೊಕ್ಕಿದೆ. ಒಟ್ಟು ಪ್ರಕರಣಗಳ ಪೈಕಿ ಇಲ್ಲಿಯವರೆಗೆ 894 ಜನ ಕೊರೊನಾ ವೈರಸ್ನಿಂದ ಗುಣಮುಖರಾಗಿ ಬಿಡುಗಡೆ ಆಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ನಿನ್ನೆ ಸೋಂಕು ಪತ್ತೆಯಾದ ಸೋಂಕಿತರನ್ನ ಚಿಕಿತ್ಸೆಗಾಗಿ ಜಿಲ್ಲೆಯ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಾರಾಷ್ಟ್ರದಿಂದ ಆಗಮಿಸಿದ ವಲಸಿಗರಲ್ಲೇ ಕಾಣಿಸಿಕೊಳ್ಳುತ್ತಿದ್ದ ಕೊರೊನಾ ಸೋಂಕು ಈಗ ಸಮುದಾಯದ ಹಂತಕ್ಕೂ ತಲುಪಿದ್ದು, ಜಿಲ್ಲೆಯಲ್ಲೀ ILI ಮತ್ತು SARI ಪ್ರಕರಣಗಳು ಹೆಚ್ಚುತ್ತಿವೆ.
ಸೋಂಕು ತಗುಲಿದವರಲ್ಲಿ ಕೊರೊನಾ ವಾರಿಯರ್ಸ್ ಆದ ಪೊಲೀಸರಿಗೂ ಪಾಸಿಟಿವ್ ಬಂದಿದ್ದು, ಜನರಲ್ಲಿ ಭೀತಿ ಮುಂದುವರೆದಿದೆ.