ಯಾದಗಿರಿ:ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಒಬ್ಬರು ಮೃತಪಟ್ಟಿದ್ದು, ಹೊಸದಾಗಿ 142 ಕೋವಿಡ್ ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 5536ಕ್ಕೆ ಏರಿಕೆಯಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ 142 ಜನರಿಗೆ ಕೊರೊನಾ, ಓರ್ವ ಸೋಂಕಿಗೆ ಬಲಿ - ಓರ್ವ ಸೋಂಕಿಗೆ ಬಲಿ
ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದವರಲ್ಲಿಂದು 99 ಜನರು ಸಂಪೂರ್ಣ ಗುಣಮುಖರಾಗಿದ್ದು, ಒಟ್ಟಾರೆ ಇದೂವರೆಗೆ 4254 ಮಂದಿ ಗುಣಮುಖರಾಗಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 41 ಜನರು ಮೃತಪಟ್ಟಿರುತ್ತಾರೆ. ಸಕ್ರಿಯ ಪ್ರಕರಣಗಳಲ್ಲಿ 1241 ಮಂದಿ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿಂದು 142 ಜನರಿಗೆ ಕೊರೊನಾ, ಓರ್ವ ಸೋಂಕಿಗೆ ಬಲಿ
ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದವರಲ್ಲಿ, 99 ಜನರು ಸಂಪೂರ್ಣ ಗುಣಮುಖರಾಗಿದ್ದು, ಒಟ್ಟಾರೆ ಇದೂವರೆಗೆ 4,254 ಮಂದಿ ಗುಣಮುಖರಾಗಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 41 ಜನರು ಮೃತಪಟ್ಟಿರುತ್ತಾರೆ. ಸಕ್ರಿಯ ಪ್ರಕರಣಗಳಲ್ಲಿ 1241 ಮಂದಿ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ವರದಿಯಾದ 142 ಪ್ರಕರಣಗಳಲ್ಲಿ 55 ಜನ ಯಾದಗಿರಿ ನಗರ ಮತ್ತು ಗ್ರಾಮೀಣ ಪ್ರದೇಶವರು, 40 ಜನ ಶಹಾಪುರ ತಾಲೂಕಿನವರು. ಇನ್ನುಳಿದ 47 ಜನ ಸುರಪುರ ತಾಲೂಕಿನವರಾಗಿದ್ದಾರೆ.