ಯಾದಗಿರಿ: ಜಿಲ್ಲೆಯಲ್ಲಿ ನಿನ್ನೆ ಹೊಸದಾಗಿ 116 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 3,537ಕ್ಕೆ ಏರಿಕೆಯಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ ನಿನ್ನೆ 116 ಕೋವಿಡ್ ಪ್ರಕರಣ ದೃಢ: 43 ಮಂದಿ ಗುಣಮುಖ - ಯಾದಗಿರಿ ಜಿಲ್ಲೆಯಲ್ಲಿ 116 ಕೋವಿಡ್ ಪ್ರಕರಣ ದೃಢ
ಯಾದಗಿರಿ ಜಿಲ್ಲೆಯಲ್ಲಿ ನಿನ್ನೆ ಹೊಸದಾಗಿ 116 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 43 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ನಿನ್ನೆ 116 ಕೋವಿಡ್ ಪ್ರಕರಣ ದೃಢ
ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದವರಲ್ಲಿ 43 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟಾರೆ ಈವರೆಗೆ 2,331 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ 1,187 ಮಂದಿ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಸೋಂಕಿನಿಂದ ಈವರೆಗೆ 19 ಮಂದಿ ಸಾವನ್ನಪ್ಪಿದ್ದಾರೆ.
ನಿನ್ನೆ ವರದಿಯಾದ 116 ಪ್ರಕರಣಗಳಲ್ಲಿ 58 ಮಂದಿ ಯಾದಗರಿ ನಗರ ಮತ್ತು ಗ್ರಾಮೀಣ ಪ್ರದೇಶದವರು, 36 ಮಂದಿ ಶಹಾಪುರ ತಾಲ್ಲೂಕಿನ ನಗರ ಮತ್ತು ಗ್ರಾಮೀಣ ಭಾಗದವರು ಉಳಿದಂತೆ 22 ಮಂದಿ ಸುರಪೂರ ನಗರ ಹಾಗೂ ಗ್ರಾಮೀಣ ಪ್ರದೇಶದವರಾಗಿದ್ದಾರೆ.