ಕರ್ನಾಟಕ

karnataka

ETV Bharat / state

ನೋಡ ನೋಡುತ್ತಿದ್ದಂತೆ 10 ಎಕರೆ ಭತ್ತಕ್ಕೆ ಬೆಂಕಿ: ಬೆಳೆ ಕಳೆದುಕೊಂಡ ರೈತ ಕಂಗಾಲು - paddy destroyed at yadagiri

ಆ ಜಿಲ್ಲೆಯ ರೈತರು ಈಗಷ್ಟೇ ಪ್ರವಾಹದಿಂದ ಚೇತರಿಸಿಕೊಂಡಿದ್ರು. ಭೀಮಾ ನದಿ ನೀರು ಪಾಲಾಗಿ ಅಳಿದುಳಿದ ಬೆಳೆಯನ್ನ ರಕ್ಷಣೆ ಮಾಡಿಕೊಂಡಿದ್ರು. ಆದ್ರೆ ಇವತ್ತು ಆ ರೈತರ ಜಮೀನಿನಲ್ಲಿ ನಡೆದ ದುರ್ಘಟನೆ ರೈತರಿಗೆ ಬರ ಸಿಡಿಲು ಬಡಿದಂತಾಗಿದೆ. ಅಗ್ನಿ ಅವಘಡಕ್ಕೆ ತುತ್ತಾಗಿ ಬೆಳೆ ಸುಟ್ಟು ಹೋಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.

ಅಬ್ಬೇತುಮಕುರ ಗ್ರಾಮದ ಭತ್ತದ ಗದ್ದೆಗಳಲ್ಲಿ ಅಗ್ನಿ ಅವಘಡ
ಅಬ್ಬೇತುಮಕುರ ಗ್ರಾಮದ ಭತ್ತದ ಗದ್ದೆಗಳಲ್ಲಿ ಅಗ್ನಿ ಅವಘಡ

By

Published : Nov 11, 2020, 9:56 PM IST

ಯಾದಗಿರಿ: ಜಿಲ್ಲೆಯ ಅಬ್ಬೇತುಮಕುರ ಗ್ರಾಮದ ಭತ್ತದ ಗದ್ದೆಗಳಲ್ಲಿ ಅಗ್ನಿ ಅವಘಡ ಒಂದು ನಡೆದು ಹೋಗಿದೆ. ಈ ಅಗ್ನಿ ಅವಘಡದಿಂದ ಗ್ರಾಮದ ರೈತರು ಅಕ್ಷರಶ ಕಂಗಾಲಾಗಿ ಹೋಗಿದ್ದಾರೆ.

ಕಳೆದ ತಿಂಗಳವಷ್ಟೇ ಭೀಮಾ ನದಿ ಪ್ರವಾಹದಿಂದ ಅಬ್ಬೇತುಮಕುರ ಗ್ರಾಮದ ರೈತರು ಅಪಾರ ಪ್ರಮಾಣದ ಬೆಳೆಯನ್ನ ಕಳೆದುಕೊಂಡು ಕಂಗಾಲಾಗಿದ್ದರು. ಗ್ರಾಮದ ಸಾವಿರಾರು ಎಕರೆ ಭತ್ತದ ಬೆಳೆ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಆದ್ರೆ ಪ್ರವಾಹದಿಂದ ಚೇತರಿಸಿಕೊಂಡ ರೈತರು ಅಳಿದುಳಿದ ಭತ್ತದ ಬೆಳೆಯನ್ನ ಸಂರಕ್ಷಣೆ ಮಾಡಿಕೊಂಡಿದ್ರು. ಸದ್ಯ ಗ್ರಾಮದಲ್ಲಿ ಭತ್ತ ಕಟಾವ್ ನಡೆದಿದೆ. ಗ್ರಾಮದ ರೈತರು ಮಷೀನ್​ಗಳ ಮೂಲಕ ಭತ್ತವನ್ನ ಕಟಾವ್ ಮಾಡಿಸುತ್ತಿದ್ದಾರೆ. ಆದ್ರೆ ಇವತ್ತು ಭತ್ತದ ಗದ್ದೆಗಳಲ್ಲಿ ಅಗ್ನಿ ಅನಾಹುತ ನಡೆದಿದ್ದರಿಂದ 10 ಎಕರೆಯಲ್ಲಿ ಬೆಳೆದ ಬಂಗಾರದಂತ ಬೆಳೆ ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ.

10 ಎಕರೆ ಭತ್ತ ಬೆಂಕಿಗೆ ಆಹುತಿ

ಇವತ್ತು ಗ್ರಾಮದ ಉಮಾದೇವಿ, ಸಕ್ರಪ್ಪಗೌಡ ಹಾಗೂ ಮಹೇಶ್ ಗೌಡ ಎಂಬ ರೈತರ 10 ಎಕರೆ ಗದ್ದೆಯಲ್ಲಿ ಬೆಳೆದ ಭತ್ತದ ಬೆಳೆ ಬೆಂಕಿಯಲ್ಲಿ ಸುಟ್ಟು ಹೋಗಿದೆ. ಈ ರೈತರ ಗದ್ದೆಯ ಪಕ್ಕದಲ್ಲಿರುವ ಭತ್ತದ ಬೆಳೆಯನ್ನ ಕಟಾವ್ ಮಾಡಲಾಗಿದೆ. ಹೀಗಾಗಿ ಕಟಾವ್ ಮಾಡಿದ ಮೇಲೆ ರೈತರು ಗದ್ದೆಯಲ್ಲಿರುವ ಒಣ ಹುಲ್ಲನ್ನ ಸುಡುವುದ್ದಕ್ಕಾಗಿ ಬೆಂಕಿಯನ್ನ ಹಚ್ಚುತ್ತಾರೆ. ಆದ್ರೆ ಖಾಲಿ ಗದ್ದೆಯಲ್ಲಿ ಹಚ್ಚಿದ ಬೆಂಕಿ ಭತ್ತದ ಬೆಳೆಯಿರುವ ಗದ್ದೆಗಳಿಗೆ ಆವರಿಸಿಕೊಂಡಿದೆ. ಹೀಗಾಗಿ ನೋಡ ನೋಡುತ್ತಿದಂತ 10 ಎಕರೆ ಭತ್ತದ ಬೆಳೆಗೆ ಆವರಿಸಿಕೊಂಡಿದೆ.

ಬೆಂಕಿ ಹತ್ತಿದೆ ಮೇಲೆ ಭತ್ತದ ಬೆಳೆ ಹೊತ್ತಿ ಉರಿಯುತ್ತಿದಂತೆ ಗ್ರಾಮಸ್ಥರು ಬೆಂಕಿಯನ್ನ ನಂದಿಸಲು ಪ್ರಯತ್ನ ಮಾಡಿದ್ದಾರೆ. ಆದ್ರೆ ಬೆಂಕಿ ಹೆಚ್ಚಿನ ಪ್ರಮಾಣದಲ್ಲಿ ಆವರಸಿಕೊಂಡಿದ್ದರಿಂದ ಭತ್ತದ ಬೆಳೆ ರೈತರ ಕಣ್ಮುಂದೆ ಸುಟ್ಟು ಹೋಗಿದೆ. ಇನ್ನು ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿ ಹೆಚ್ಚಿನ ಪ್ರಮಾಣದಲ್ಲಿ ಆವರಸಿಕೊಳ್ಳುತ್ತಿದ್ದ ಬೆಂಕಿಯನ್ನ ಹರಸಾಹಸ ಪಟ್ಟು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ABOUT THE AUTHOR

...view details