ವಿಜಯಪುರ:ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳ ಜನರ ಗಂಟಲು ದ್ರವದ ಪರೀಕ್ಷಾ ವರದಿ ಬರುವವರೆಗೆ ಕಡ್ಡಾಯವಾಗಿ ಕ್ವಾರಂಟೈನ್ ಮಾಡುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೋವಿಡ್-19 ಪರೀಕ್ಷೆ ವರದಿ ಬರುವವರೆಗೆ ಕ್ವಾರಂಟೈನ್ನಿಂದ ಬಿಡಬೇಡಿ: ಜಿಲ್ಲಾಧಿಕಾರಿ - ವಿಜಯಪುರದಲ್ಲಿ ಕೊರೊನಾ ಪ್ರಕರಣಗಳು
ಮಹಾರಾಷ್ಟ್ರ ಮತ್ತು ಇತರೆ ರಾಜ್ಯಗಳಿಂದ ಬರುವ ಪ್ರಯಾಣಿಕರ ಕ್ವಾರಂಟೈನ್, ಆರೋಗ್ಯ ತಪಾಸಣೆ ಮತ್ತು ಇತರೆ ಕ್ರಮಗಳನ್ನು ಪರಿಷ್ಕ್ರತ ನಿಯಮಾವಳಿಗಳಂತೆ ಕೈಗೊಳ್ಳಬೇಕು. ಧೂಳಖೇಡ ಚೆಕ್‍ಪೋಸ್ಟ್ ಮತ್ತು ರೈಲ್ವೈ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಸಂಪೂರ್ಣ ನಿರ್ವಹಣೆಗೆ ಗಡಿ ಪ್ರವೇಶ ಕೇಂದ್ರಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
![ಕೋವಿಡ್-19 ಪರೀಕ್ಷೆ ವರದಿ ಬರುವವರೆಗೆ ಕ್ವಾರಂಟೈನ್ನಿಂದ ಬಿಡಬೇಡಿ: ಜಿಲ್ಲಾಧಿಕಾರಿ gfgg](https://etvbharatimages.akamaized.net/etvbharat/prod-images/768-512-7547554-thumbnail-3x2-vish.jpg)
ಕೋವಿಡ್-19 ನಿಯಂತ್ರಣ ಕುರಿತು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ಜಿಲ್ಲಾ ಕಾರ್ಯಪಡೆ ಸಮಿತಿ ಮತ್ತು ನಿಗದಿತ ವೈದ್ಯಾಧಿಕಾರಿಗಳ ನಿರ್ದೇಶನದ ಮೇರೆಗೆ ಕೋವಿಡ್-19 ಪಾಸಿಟಿವ್ ರೋಗಿಗಳೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರಿಗೆ ಅಗತ್ಯಬಿದ್ದಾಗ ಮಾತ್ರ ಸಾಂಸ್ಥಿಕ ಕ್ವಾರಂಟೈನ್ ಮಾಡಬೇಕು. ಅದರಂತೆ ಪರಿಷ್ಕ್ರತ ನಿಯಮಾವಳಿಗಳನ್ವಯ ಹೋಂ ಕ್ವಾರಂಟೈನ್ ಮಾಡುವಂತೆ ತಿಳಿಸಿದರು. ಆಯಾ ಗ್ರಾಮಮಟ್ಟದ ಸಮಿತಿಗಳು ಹೋಂ ಕ್ವಾರಂಟೈನ್ ಮಾಡುವ ಬಗ್ಗೆ ಸೂಕ್ತ ಮಾಹಿತಿ ನೀಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದರು.
ಅನಾವಶ್ಯಕವಾಗಿ ಗಂಟಲು ದ್ರವ ಮಾದರಿ ಪಡೆಯದಂತೆ ತಿಳಿಸಿರುವ ಡಿಸಿ, ಕೋವಿಡ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ನಂತರ ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರು ಲಕ್ಷಣವಿಲ್ಲದಿದ್ದರೆ ನಿಯಮಾವಳಿಯಂತೆ ಬಿಡುಗಡೆಗೆ ಕ್ರಮಕೈಗೊಳಿಸಬೇಕು. ಮಹಾರಾಷ್ಟ್ರದಿಂದ ಬರುವವರಲ್ಲಿ ಕೋವಿಡ್-19 ಲಕ್ಷಣಗಳು ಕಂಡುಬರದಿದ್ದಲ್ಲಿ ವೈದ್ಯಕೀಯ ಪರೀಕ್ಷೆಯ ಅವಶ್ಯಕತೆಯಿಲ್ಲ ಎಂದು ತಿಳಿಸಿದರು.