ವಿಜಯಪುರ: ಹಾಡಹಗಲೇ ಯುವಕನೋರ್ವನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಹಕೀಂ ಚೌಕ್ನಲ್ಲಿ ಭಾನುವಾರ ನಡೆಯಿತು. ಇದರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಅಯಾನ್ ಶೇಖ್ (19) ಕೊಲೆಯಾದ ಯುವಕ. ಈತ ಮಹಾರಾಷ್ಟ್ರದ ಪುಣೆ ನಿವಾಸಿ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಯುವತಿ ವಿಚಾರವಾಗಿ ಕೊಲೆ?: ಚಪ್ಪರಬಂದ್ ಕಾಲೊನಿಯ ನಿವಾಸಿ ಹುಸೇನ್ ಸಾಬ್ (22) ನಂದಿಹಾಳ ಕೃತ್ಯ ಎಸಗಿದ ಆರೋಪಿ. ಕೊಲೆ ಬಳಿಕ ಹುಸೇನ್ ಪರಾರಿಯಾಗಿದ್ದು ಸದ್ಯ ಆತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ತನ್ನ ಸ್ನೇಹಿತನ ಮದುವೆಗೆಂದು ಅಯಾನ್ ಶೇಖ್ ಪುಣೆಯಿಂದ ಬಂದಿದ್ದನು. ಈ ವೇಳೆ ಈ ಕೃತ್ಯ ನಡೆದಿದೆ. ಹುಡುಗಿಯ ವಿಚಾರವಾಗಿ ಈ ಕೊಲೆ ನಡೆದಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
''ಮೃತ ಯುವಕ ಅಯಾನ್ ಪುಣೆ ನಿವಾಸಿಯಾಗಿದ್ದು ತನ್ನ ಸ್ನೇಹಿತನ ಮದುವೆ ನಿಮಿತ್ತ ಇಲ್ಲಿಗೆ ಆಗಮಿಸಿದ್ದನು. ಈ ವೇಳೆ ಈ ಕೃತ್ಯ ನಡೆದಿದೆ. ತನ್ನ ನಿಶ್ಚಿತಾರ್ಥ ಹಾಳಾಗಿದ್ದಕ್ಕೆ ಅಯಾನ್ ಶೇಖ್ ಕಾರಣವೆಂದು ತಿಳಿದು ಆರೋಪಿ ಹುಸೇನ್ ಈ ಕೃತ್ಯ ಎಸಗಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ಕೊಲೆ ಆರೋಪಿ ಹುಸೇನ್ಸಾಬ್ನನ್ನು ಬಂಧಿಸಲಾಗಿದೆ'' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನವಾಣೆ ತಿಳಿಸಿದ್ದಾರೆ.