ಕರ್ನಾಟಕ

karnataka

ETV Bharat / state

ವಿಜಯಪುರ: ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಪತ್ತೆ

ಕಳೆದ ಎರಡು ದಿನಗಳ ಹಿಂದೆ ವಿಜಯಪುರ ಜಿಲ್ಲೆಯ ಬಾಗೇವಾಡಿ ತಾಲೂಕಿನ ನೇಗನಾಳ-ಮುಳ್ಳಾಳ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಇಂದು ಪತ್ತೆಯಾಗಿದೆ.

Youth dead body found
ಯುವಕನ ಮೃತಹೇದ ಪತ್ತೆ

By

Published : Aug 29, 2021, 9:16 PM IST

Updated : Aug 29, 2021, 9:48 PM IST

ವಿಜಯಪುರ:ಕಳೆದೆರಡು ದಿನಗಳಿಂದ ಸುರಿದ ಮಳೆಗೆ ಜಿಲ್ಲೆಯ ಬಾಗೇವಾಡಿ ತಾಲೂಕಿನ ನೇಗನಾಳ-ಮುಳ್ಳಾಳ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಇಂದು ಪತ್ತೆಯಾಗಿದೆ.

ಯುವಕನ ಮೃತದೇಹ ಪತ್ತೆ

ಮಂಜುನಾಥ್ ಸಿದ್ದನಗೌಡ ಪಾಟೀಲ (22) ಮೃತ ಯುವಕ. ಈತ ಬೈಕ್​​ನಲ್ಲಿ ನೇಗನಾಳ-ಮುಳ್ಳಾಳ ಹಳ್ಳ ದಾಟುತ್ತಿದ್ದ. ಈ ವೇಳೆ ಕೆರೆಯಲ್ಲಿ ಏಕಾಏಕಿ ನೀರಿನ ರಭಸ ಹೆಚ್ಚಾಗಿದ್ದರಿಂದ ಹಿಂಬದಿಯಲ್ಲಿದ್ದ ಯುವಕ ನೀರಿನಲ್ಲಿ ಕೊಚ್ಚಿ ಹೋಗಿದ್ದ.

ಸತತ ಎರಡು ದಿನಗಳಿಂದ ನುರಿತ ಈಜುಗಾರರು, ಅಗ್ನಿಶಾಮಕ ದಳದ ಸಿಬ್ಬಂದಿ ಯುವಕನ ಮೃತದೇಹದ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು. ಇಂದು ಕೊಳೆತ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಘಟನೆಯಲ್ಲಿ ಪ್ರಾಣಾಪಾಯದಿಂದ ಪಾರಾದ ಇಮಾಮಸಾಬ ನದಾಫ್ ಎಂಬುವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ: ನಾಳೆ ಸಿಎಂ ಸಭೆ ಬಳಿಕ ಶಾಲಾರಂಭ ಬಗ್ಗೆ ನಿರ್ಧಾರ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

Last Updated : Aug 29, 2021, 9:48 PM IST

ABOUT THE AUTHOR

...view details