ಮುದ್ದೇಬಿಹಾಳ: ತಾಳಿಕೋಟೆ ಪಟ್ಟಣದ ಸಮೀಪ ಡೋಣಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ಯುವಕನನ್ನು ಮಂಗಳವಾರ ರಾತ್ರಿ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಮೂಕಿಹಾಳ ಗ್ರಾಮದ ಇಸ್ಮಾಯಿಲ್ ಭಾವಿಕಟ್ಟಿ (23) ಬೈಕ್ ಮೇಲೆ ಹೋಗುತ್ತಿದ್ದಾಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ.
ಡೋಣಿ ನದಿಯಲ್ಲಿ ಕೊಚ್ಚಿಹೋಗಿದ್ದ ಯುವಕನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ - ಮುದ್ದೇಬಿಹಾಳದಲ್ಲಿ ಯುವಕನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಡೋಣಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ಯುವಕನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.
![ಡೋಣಿ ನದಿಯಲ್ಲಿ ಕೊಚ್ಚಿಹೋಗಿದ್ದ ಯುವಕನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ young-man-rescued-in-doni-river](https://etvbharatimages.akamaized.net/etvbharat/prod-images/768-512-13001450-thumbnail-3x2-news.jpg)
ಡೋಣಿ ನದಿಯಲ್ಲಿ ಕೊಚ್ಚಿಹೋಗಿದ್ದ ಯುವಕನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಪಟ್ಟಣದಲ್ಲಿ ಕೆಲಸ ಮುಗಿಸಿಕೊಂಡು ಹೊರಟಿದ್ದ ಈತ, ದೋಣಿ ನದಿಯ ಕೆಳಮಟ್ಟದ ಸೇತುವೆ ಮೇಲೆ ನೀರಿನ ರಭಸ ಅರಿಯದೇ ಬೈಕ್ನಲ್ಲಿ ದಾಟಲು ಯತ್ನಿಸಿ ತೇಲಿ ಹೋಗಿದ್ದ. ಅದೃಷ್ಟವಶಾತ್ ನದಿ ಮಧ್ಯದಲ್ಲಿದ್ದ ಮುಳ್ಳಿನಕಂಟಿ ಕಂಡಿದ್ದು, ಅದನ್ನು ಹಿಡಿದುಕೊಂಡು ರಕ್ಷಣೆಗಾಗಿ ಕೂಗಿದ್ದಾನೆ.
ನದಿ ಪಕ್ಕದಲ್ಲಿದ್ದ ಜನರು ಆತನ ರಕ್ಷಣೆಗಾಗಿ ಕೂಡಲೇ ಪಟ್ಟಣದ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಶಂಕರಗೌಡ ನರಸಲಗಿ ನೇತೃತ್ವದ ಸಿಬ್ಬಂದಿ ಹಡಗಿನಾಳ ಗ್ರಾಮಸ್ಥರ ಸಹಾಯದೊಂದಿಗೆ ಹಗ್ಗದಿಂದ ಯುವಕನನ್ನು ರಕ್ಷಿಸಿ, ಬೈಕ್ ಮೇಲಕ್ಕೆತ್ತಿದ್ದಾರೆ.