ವಿಜಯಪುರ : ಹುಟ್ಟುಹಬ್ಬದ ಪ್ರಯುಕ್ತ 500 ಜನರಿಗೆ ಮಾಸ್ಕ್ ವಿತರಣೆ ಹಾಗೂ ಜನತಾ ಕರ್ಫೂ ಪಾಲನೆ ಮಾಡುವಂತೆ ಯುವಕನೊಬ್ಬ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾನೆ.
ಹುಟ್ಟು ಹಬ್ಬದಂದು ಯುವಕನಿಂದ ಕೊರೊನಾ ಜಾಗೃತಿ: ಮಾಸ್ಕ್ ವಿತರಣೆ - Latest Corona Awareness Program In Vijaypur
ವಿಜಯಪುರ ನಗರದ ಗೋಪಾಲಪುರ ಬಡಾವಣೆಯಲ್ಲಿ ಯುವಕನೊಬ್ಬ ತನ್ನ ಹುಟ್ಟುಹಬ್ಬದ ನಿಮಿತ್ತ ಸ್ನೇಹಿತರ ಜೊತೆ ಸೇರಿ ಸಾರ್ವಜನಿಕರಿಗೆ ಕೊರೊನಾ ವೈರಸ್ ಕುರಿತಂತೆ ಜಾಗೃತಿ ಮೂಡಿಸುವುದರ ಜೊತೆಗೆ 500 ಮಾಸ್ಕ್ ವಿತರಣೆ ಮಾಡಿದ್ದಾನೆ.
ಮಾಸ್ಕ್ ವಿತರಿಸಿದ ಯುವಕ
ನಗರದ ಗೋಪಾಲಪುರ ಬಡಾವಣೆಯಲ್ಲಿ ಕಿರಣ ಪಾಟೀಲ್ ಎಂಬ ಯುವಕ ತನ್ನ ಜನ್ಮದಿನದ ನಿಮಿತ್ತ ಕೂರೊನಾ ಜಾಗೃತಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತನ್ನ ಸ್ನೇಹಿತರೊಂದಿಗೆ ಸೇರಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾನೆ. ರಸ್ತೆಯಲ್ಲಿ ಹೋಗುವ ಜನರಿಗೆ ಮಾಸ್ಕ್ ಧರಸಿ ಓಡಾಡುವಂತೆ ಹಾಗೂ ನಾಳೆ ಮನೆಯಿಂದ ಹೊರಗೆ ಬಾರದಂತೆ ಕೇಳಿಕೊಳ್ಳುತ್ತಿದ್ದಾನೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಯುವಕ, ರಾಜ್ಯದೆಲ್ಲೆಡೆ ಕೊರೊನಾ ಹೆಚ್ಚುತ್ತಿರುವುದರಿಂದ, ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾನೆ.