ಕರ್ನಾಟಕ

karnataka

ETV Bharat / state

ವಿಜಯಪುರ : ಪ್ರೀತಿಸಿ ಮದುವೆಯಾದ ತಪ್ಪಿಗೆ ಪ್ರಾಣ ತೆತ್ತ ಯುವಕ - ವಿಜಯಪುರದಲ್ಲಿ ಯುವಕನ ಕೊಲೆ

ನೋಡಲು ಇದೊಂದು ಅಪಘಾತ ಎಂಬಂತೆ ಬಿಂಬಿಸಲಾಗಿದೆ. ಆದರೆ, ಪೊಲೀಸರು ಸ್ಥಳ ಪರಿಶೀಲನೆ ಹಾಗೂ ಸಾವನ್ನಪ್ಪಿರುವ ಯುವಕನ ಹಿನ್ನೆಲೆ ತಿಳಿದುಕೊಂಡಾಗ ಇದು ಕೊಲೆ ಎಂದು ದೃಢಪಟ್ಟಿದೆ..

ಪ್ರೀತಿಸಿ ಮದುವೆಯಾದ ತಪ್ಪಿಗೆ ಪ್ರಾಣ ತೆತ್ತ ಯುವಕ
ಪ್ರೀತಿಸಿ ಮದುವೆಯಾದ ತಪ್ಪಿಗೆ ಪ್ರಾಣ ತೆತ್ತ ಯುವಕ

By

Published : Feb 15, 2022, 7:13 PM IST

ವಿಜಯಪುರ :ಪ್ರೇಮ ಪ್ರಕರಣವೊಂದು ದುರಂತ ಅಂತ್ಯ ಕಂಡ ಘಟನೆ ನಗರದ ರೇಡಿಯೋ ಕೇಂದ್ರದ ಬಳಿ ನಡೆದಿದೆ. ಹಾಡುಹಗಲೇ ಹುಡುಗಿಯ ಕುಟುಂಬದವರು ಯುವಕನ್ನು ಅಪಘಾತ ರೀತಿ ಬಿಂಬಿಸಿ ಕೊಲೆ ಮಾಡಿರೋದು ಈಗ ತನಿಖೆಯಿಂದ ಬಯಲಾಗಿದೆ.‌

ಪೊಲೀಸ್ ಅಧಿಕಾರಿಯ ಮಗನೊಬ್ಬ ಬೈಕ್ ಮೇಲೆ ಹೋಗುತ್ತಿದ್ದ ವೇಳೆ ಬುಲೆರೋ ಜೀಪ್ ಹಾಯಿಸಿ ಹತ್ಯೆ ಮಾಡಲಾಗಿದೆ. ಮುಂದೆ ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್​​ಗೆ ಹಾಯಿಸಿ ನಂತರ ಬುಲೆರೋ ವಾಹನ ಆತನ ಮೇಲೆ ಹತ್ತಿಸಲಾಗಿದೆ.

ನೋಡಲು ಇದೊಂದು ಅಪಘಾತ ಎಂಬಂತೆ ಬಿಂಬಿಸಲಾಗಿದೆ. ಆದರೆ, ಪೊಲೀಸರು ಸ್ಥಳ ಪರಿಶೀಲನೆ ಹಾಗೂ ಸಾವನ್ನಪ್ಪಿರುವ ಯುವಕನ ಹಿನ್ನೆಲೆ ತಿಳಿದುಕೊಂಡಾಗ ಇದು ಕೊಲೆ ಎಂದು ದೃಢಪಟ್ಟಿದೆ.

ಪ್ರೀತಿಸಿ ಮದುವೆಯಾದ ತಪ್ಪಿಗೆ ಪ್ರಾಣ ತೆತ್ತ ಯುವಕ..

ಸಾವನ್ನಪ್ಪಿರುವವನ್ನು ಗಾಂಧಿಚೌಕ್ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್​​ಐ ಆರ್ ಬಿ ಕೂಡಗಿ ಪುತ್ರ ಮುಸ್ತಕಿನ್ ಕೂಡಗಿ (28) ಎಂದು ಗುರುತಿಸಲಾಗಿದೆ. ಮುಸ್ತಕಿನ್ ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ವಾಹನ ಹತ್ತಿಸಿ ಕೊಲೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಗಾಂಧಿಚೌಕ್ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದರು.‌

ಪ್ರೇಮ ಪ್ರಕರಣ ಕೊಲೆಗೆ ಕಾರಣ :ಕೊಲೆಯಾದ ಮುಸ್ತಕಿನ್ ಅವರ ಸಂಬಂಧಿ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದನು. ಆದರೆ, ಅದಕ್ಕೆ ಯುವತಿಯ ಕುಟುಂಬ ಒಪ್ಪಿರಲಿಲ್ಲ, ಅಷ್ಟಾಗಿಯೂ ಮುಸ್ತಕಿನ್​​​ ಆ ಯುವತಿಯನ್ನು ಕರೆದುಕೊಂಡು ಹೋಗಿ ಮದುವೆಯಾಗಿದ್ದಲ್ಲದೇ, ಪ್ರತ್ಯೇಕ‌ ಸಂಸಾರ ಸಹ ಮಾಡುತ್ತಿದ್ದ. ಇದರಿಂದ ಯುವತಿಯ ತಂದೆ, ಅಣ್ಣ ಮತ್ತು ಕುಟುಂಬದ ಸದಸ್ಯರು ಕುಪಿತಗೊಂಡಿದ್ದರು. ಇಂದು ಆಕಾಶವಾಣಿ ಕೇಂದ್ರದ ಬಳಿ ಬೈಕ್​​​ನಲ್ಲಿ ಹೋಗುತ್ತಿದ್ದ ಮುಸ್ತಕಿನನ್ನು ಬುಲೆರೋ ವಾಹನ ಹಾಯಿಸಿ ಅಪಘಾತ ಎಂದು ಬಿಂಬಿಸುವ ರೀತಿ ಕೊಲೆ ಮಾಡಿದ್ದಾರೆ.

ಘಟನೆ ಬಗ್ಗೆ ಎಸ್ಪಿ ಮಾಹಿತಿ :ವಿಜಯಪುರದಲ್ಲಿ ಕ್ರೈಂ ಪಿಎಸ್ಐ ಪುತ್ರನ ಹತ್ಯೆ ಪ್ರಕರಣವನ್ನು ಆ್ಯಕ್ಸಿಡೆಂಟ್ ಎನ್ನುವಂತೆ ಬಿಂಬಿಸಿ ಹತ್ಯೆ ಮಾಡಿದ್ದಾರೆ ಎಂದು ಎಸ್ಪಿ ಆನಂದಕುಮಾರ್ ಮಾಹಿತಿ ನೀಡಿದ್ದಾರೆ. ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಬುಲೆರೋ ವಾಹನ ಡಿಕ್ಕಿ ಹೊಡೆಸಿ, ಬಳಿಕ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.

ಮುಸ್ತಕಿನ್ ಬೈಕ್ ಮೇಲೆ ನಿರ್ಮಾಣ ಹಂತದ ಮನೆಗೆ ತೆರಳುವಾಗ ಬುಲೆರೋ ವಾಹನದಿಂದ ಡಿಕ್ಕಿ ಹೊಡೆಸಿ ಕೊಲೆ ಮಾಡಲಾಗಿದೆ. ರೌಫ್‌ ಶೇಖ್ ಹಾಗೂ ಕುಟುಂಬಸ್ಥರು ಸೇರಿ ಹತ್ಯೆಗೈದಿರುವ ಆರೋಪ ಕೇಳಿ ಬಂದಿದೆ ಎಂದು ತಿಳಿಸಿದ್ದಾರೆ.

ರೌಫ್ ಶೇಖ್ ಪುತ್ರಿ ಅತೀಕಾಳನ್ನು ಪ್ರೀತಿಸಿ ಮುಸ್ತಕಿನ್ ಮದುವೆ ಯಾಗಿದ್ದ. ಯುವತಿಯ ತಂದೆ ರೌಫ್ ಶೇಖ್ ವಿರೋಧದ ಮಧ್ಯೆ ಪ್ರೀತಿಸಿ ಮದುವೆಯಾಗಿದ್ದರು. ಈ ಕುರಿತಂತೆ ಕೊಲೆ ಕೇಸ್ ದಾಖಲಿಸಲಾಗಿದೆ. ಪೊಲೀಸರು ಆರೋಪಿಗಳ ಬಂಧನಕ್ಕೆ ಮೂರು ತನಿಖಾ ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details