ವಿಜಯಪುರ: ಲಾರಿ ಹಿಂಬದಿ ಚಕ್ರದಡಿ ಸಿಲುಕಿ ಯುವಕ ಸಾವನ್ನಪ್ಪಿರುವ ಘಟನೆ ನಗರದ ಹಿಟ್ಟಿನಹಳ್ಳಿ ಫಾರ್ಮ್ ಬಳಿ ನಡೆದಿದೆ.
ರಸ್ತೆ ವಿಭಜಕಕ್ಕೆ ಗುದ್ದಿದ ಬೈಕ್: ಲಾರಿ ಚಕ್ರದಡಿ ಸಿಲುಕಿ ಯುವಕ ಸಾವು - crime news vijayapura
ಯುವಕನೊಬ್ಬ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಲಾರಿ ಹಿಂಬದಿ ಚಕ್ರದಡಿ ಸಿಲುಕಿ ವಿಜಯಪುರದ ಹಿಟ್ಟಿನಹಳ್ಳಿ ಫಾರ್ಮ್ ಬಳಿ ಸಾವನ್ನಪ್ಪಿದ್ದಾನೆ.
ಸಾವನ್ನಪ್ಪಿದ ಯುವಕ
ನಗರದ ಜಲನಗರ ನಿವಾಸಿ ಪ್ರವೀಣ ಹಳ್ಳೆಪ್ಪಗೋಳ(25) ಮೃತ ಯುವಕನಾಗಿದ್ದು, ಈತ ಬೈಕ್ನಲ್ಲಿ ವೇಗವಾಗಿ ಹೋಗುತ್ತಿದ್ದ ವೇಳೆ ರಸ್ತೆಯ ಡಿವೈಡರ್ಗೆ ಡಿಕ್ಕಿ ಹೊಡೆದು ಲಾರಿ ಹಿಂಬದಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ. ಈ ಘಟನೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50ರಲ್ಲಿ ತಡರಾತ್ರಿ ನಡೆದಿದೆ.
ಇನ್ನು ಈ ಘಟನೆ ಸಂಬಂಧ ನಗರದ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.