ವಿಜಯಪುರ:ಯುವಕನೊಬ್ಬ ಲಾಂಗ್ನಿಂದ ಕೇಕ್ ಕತ್ತರಿಸಿ ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಲಾಂಗ್ನಿಂದ ಕೇಕ್ ಕಟ್ ಮಾಡಿ ಬರ್ತಡೇ ಸೆಲೆಬ್ರೇಷನ್: ವಿಡಿಯೋ ವೈರಲ್ - ವಿಜಯಪುರ ಲೇಟೆಸ್ಟ್ ಅಪ್ಡೇಟ್ ನ್ಯೂಸ್
ವಿಜಯಪುರದ ದರ್ಬಾರ್ ಗಲ್ಲಿಯ ಯುವಕ ತೌಫಿಕ್ ಎಂಬಾತ ಲಾಂಗ್ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ತನ್ನ ಸ್ನೇಹಿತರೊಂದಿಗೆ ಆಚರಿಸಿಕೊಂಡಿದ್ದಾನೆ. ಕೇಕ್ ಕಟ್ ಮಾಡುವ ವೇಳೆ ಆತನ ಗೆಳೆಯರು ಕೂಡ ಲಾಂಗ್ನಿಂದ ಕೇಕ್ ಕಟ್ ಮಾಡಲು ಸಹಾಯ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
![ಲಾಂಗ್ನಿಂದ ಕೇಕ್ ಕಟ್ ಮಾಡಿ ಬರ್ತಡೇ ಸೆಲೆಬ್ರೇಷನ್: ವಿಡಿಯೋ ವೈರಲ್ Young man Cake cut from sword on Birthday Celebration](https://etvbharatimages.akamaized.net/etvbharat/prod-images/768-512-11109732-thumbnail-3x2-net.jpg)
ಲಾಂಗ್ನಿಂದ ಕೇಕ್ ಕಟ್ ಮಾಡಿ ಬರ್ತಡೇ ಸೆಲೆಬ್ರೇಷನ್
ಲಾಂಗ್ನಿಂದ ಕೇಕ್ ಕಟ್ ಮಾಡಿ ಬರ್ತಡೇ ಸೆಲೆಬ್ರೇಷನ್: ವಿಡಿಯೋ
ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ನಿವಾಸದ ಸಮೀಪವೇ ಬರ್ತಡೇ ಸೆಲೆಬ್ರೇಷನ್ ಮಾಡಲಾಗಿದೆ. ನಗರದ ದರ್ಬಾರ್ ಗಲ್ಲಿಯ ಯುವಕ ತೌಫಿಕ್ ಎಂಬಾತ ಲಾಂಗ್ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ತನ್ನ ಸ್ನೇಹಿತರೊಂದಿಗೆ ಆಚರಿಸಿಕೊಂಡಿದ್ದಾನೆ. ಕೇಕ್ ಕಟ್ ಮಾಡುವ ವೇಳೆ ಆತನ ಗೆಳೆಯರು ಕೂಡ ಲಾಂಗ್ನಿಂದ ಕೇಕ್ ಕಟ್ ಮಾಡಲು ಸಹಾಯ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಪೊಲೀಸರು ಯುವಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.