ವಿಜಯಪುರ:ತಾಲೂಕಿನ ಹಿಟ್ನಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಸೇತುವೆ ಕೆಳಗೆಭೀಕರವಾಗಿ ಕೊಲೆಯಾದ ಸ್ಥಿತಿಯಲ್ಲಿ ಅಪರಿಚಿತ ಯುವತಿವೋರ್ವಳ ಶವ ಪತ್ತೆಯಾಗಿದೆ.
ತಲೆಯ ಮೇಲೆ ಕಲ್ಲು ಹಾಕಿ ಯುವತಿಯ ಬರ್ಬರ ಕೊಲೆ... ವಿಜಯಪುರ ಬಳಿ ಭಯಾನಕ ಕೃತ್ಯ - undefined
ಅಪರಿಚಿತ ಯುವತಿಯ ಕೊಲೆ ಪ್ರಕರಣ ವಿಜಯಪುರ ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದೆ. ಯುವತಿ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿ, ನಂತರ ಗುರುತು ಸಿಗದಂತೆ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ ದುಷ್ಕರ್ಮಿಗಳು.
![ತಲೆಯ ಮೇಲೆ ಕಲ್ಲು ಹಾಕಿ ಯುವತಿಯ ಬರ್ಬರ ಕೊಲೆ... ವಿಜಯಪುರ ಬಳಿ ಭಯಾನಕ ಕೃತ್ಯ](https://etvbharatimages.akamaized.net/etvbharat/prod-images/768-512-3239856-thumbnail-3x2-bng.jpg)
ಯುವತಿಯ ಬರ್ಬರ ಹತ್ಯೆ
ಸುಮಾರು 25 ರಿಂದ 28 ವರ್ಷ ವಯಸ್ಸಿನ ಈ ಯುವತಿ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿ ನಂತರ ಆಕೆಯ ಗುರುತು ಸಿಗದಂತೆ ದುಷ್ಕರ್ಮಿಗಳು ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಭೀಕರ ಕೊಲೆಯಿಂದ ಜಿಲ್ಲೆಯ ಜನರು ಬೆಚ್ಚಿಬಿದ್ದಿದ್ದಾರೆ.
ಸ್ಥಳಕ್ಕೆ ವಿಜಯಪುರ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಯುವತಿಯ ಗುರುತು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.