ವಿಜಯಪುರ:ತನ್ನ ಜೊತೆಗಿರುವ ಫೋಟೋಗಳನ್ನು ಪ್ರಿಯಕರ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದಾನೆ ಎಂದು ಮಾನಸಿಕವಾಗಿ ನೊಂದ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಂದಗಿ ತಾಲೂಕಿನಲ್ಲಿ ನಡೆದಿದೆ.
ಫೇಸ್ಬುಕ್ಗೆ ಫೋಟೋ ಹಾಕಿದ ಪ್ರಿಯಕರ: ಮನನೊಂದು ಯುವತಿ ಆತ್ಮಹತ್ಯೆ! - ಬೂದಿಹಾಳ ಪಿಹೆಚ್ ಗ್ರಾಮ
ಪ್ರಿಯಕರ ತನ್ನ ಜೊತೆಯಿದ್ದ ಫೋಟೋಗಳನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದಾನೆ ಎಂದು ಮಾನಸಿಕವಾಗಿ ನೊಂದ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಂದಗಿ ತಾಲೂಕಿನಲ್ಲಿ ನಡೆದಿದೆ. ಪ್ರಕರಣ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![ಫೇಸ್ಬುಕ್ಗೆ ಫೋಟೋ ಹಾಕಿದ ಪ್ರಿಯಕರ: ಮನನೊಂದು ಯುವತಿ ಆತ್ಮಹತ್ಯೆ!](https://etvbharatimages.akamaized.net/etvbharat/prod-images/768-512-4485905-thumbnail-3x2-bikku.jpg)
ಸಿಂದಗಿ ತಾಲೂಕಿನ ಗ್ರಾಮವೊಂದರ 23 ವರ್ಷದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಯುವತಿಯ ಸಾವಿಗೆ ಪ್ರಿಯಕರ ಶಿವಾನಂದ ಬಿರಾದಾರ ಎಂಬಾತನ ಫೇಸ್ಬುಕ್ ಪ್ರಚಾರವೇ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ. ಪಿಯುಸಿ ಓದುತ್ತಿರುವಗಾಲೇ ಯುವತಿ ಹಾಗೂ ಕೆರೂಟಗಿ ಗ್ರಾಮದ ಶಿವಾನಂದನಿಗೆ ಪರಿಚಯವಾಗಿದೆ. ಪರಿಚಯ ಪ್ರೀತಿಯಾಗಿ ಅವರಿಬ್ಬರು ಆಗಾಗ ಪಾರ್ಕ್, ಹೋಟೆಲ್ ಹೀಗೆ ಸುತ್ತಾಟ ನಡೆಸುವಾಗ ಸಾಮಾನ್ಯವಾಗಿ ಪೋಟೋಗಳನ್ನು ತೆಗೆದುಕೊಂಡಿದ್ದಾರೆ.
ಈ ಫೋಟೋಗಳನ್ನು ಶಿವಾನಂದ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿ ಪ್ರಚಾರ ಪಡೆದಿದ್ದನಂತೆ. ಇದರಿಂದ ಮನನೊಂದ ಯುವತಿ ಮನೆಯಲ್ಲಿದ್ದ ಸೀಮೆಎಣ್ಣೆ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ.ಪ್ರಕರಣ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.