ಕರ್ನಾಟಕ

karnataka

ETV Bharat / state

ಹಣದ ವಿಚಾರಕ್ಕೆ ಮನೆಯವರ ಜೊತೆ ಜಗಳ: ಯುವಕ ನೇಣಿಗೆ ಶರಣು - vijayapura latest news

ಕುಲಕುರ್ಕಿ ಗ್ರಾಮದಲ್ಲಿ ಯುವಕನೊಬ್ಬ ಮನೆಯವರೊಂದಿಗೆ ಹಣದ ವಿಚಾರವಾಗಿ ಗಲಾಟೆ ಮಾಡಿಕೊಂಡು ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಯುವಕ ನೇಣಿಗೆ ಶರಣು

By

Published : Oct 29, 2019, 7:53 PM IST

ವಿಜಯಪುರ:ಮನೆಯಲ್ಲಿ ಹಣದ ವಿಚಾರವಾಗಿ ಗಲಾಟೆ ಮಾಡಿಕೊಂಡು ಯುವಕ ನೇಣಿಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕುಲಕುರ್ಕಿ ಗ್ರಾಮದಲ್ಲಿ ನಡೆದಿದೆ.

ಯುವಕ ನೇಣಿಗೆ ಶರಣು

ಪರಸಪ್ಪ ಮಳೆಪ್ಪ ಕಸನಕ್ಕಿ (20) ಮೃತ ದುರ್ದೈವಿ. ಮನೆಯವರ ಜೊತೆಗೆ ಹಣದ ವಿಷಯಕ್ಕೆ ಗಲಾಟೆ ಮಾಡಿಕೊಂಡು ಅದರಿಂದ ಮನ‌ನೊಂದ ಯುವಕ, ಗ್ರಾಮದ ಹೊರವಲಯದಲ್ಲಿರುವ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಯುವಕನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಮನಗೂಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ABOUT THE AUTHOR

...view details