ವಿಜಯಪುರ: ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಲಾಭ ಪಡೆಯುವ ಹುನ್ನಾರ ನಡೆಯುತ್ತಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪಂಚಮಸಾಲಿ ಹೋರಾಟಕ್ಕೆ ಬಂದಿದ್ದಾರೆ. ಆದರೆ ಅವರು ಬಿಎಸ್ವೈ, ಬಿ ವೈ ವಿಜಯೇಂದ್ರ, ಸಚಿವ ಮುರುಗೇಶ ನಿರಾಣಿಯನ್ನು ಬೈಯ್ದಿದ್ದು ಬಿಟ್ಟರೆ, ಸಮಾಜಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಪಂಚಮಸಾಲಿ ಮುಖಂಡ ಸುರೇಶ ಬಿರಾದಾರ ಪ್ರಶ್ನಿಸಿದ್ದಾರೆ.
ಪಂಚಮಸಾಲಿ ಮೀಸಲಾತಿ ಹೋರಾಟದ ಲಾಭ ಪಡೆಯಲು ಯತ್ನಾಳ್ ಪ್ರಯತ್ನ: ಸುರೇಶ ಬಿರಾದಾರ - CM Bommai
ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವ ಬಗ್ಗೆ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಆದರೆ ಕೆಲವರು ಈ ಹೋರಾಟದಿಂದ ಲಾಭ ಪಡೆಯಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಪಂಚಮಸಾಲಿ ಮುಖಂಡ ಸುರೇಶ ಬಿರಾದಾರ ಹೇಳಿದ್ದಾರೆ.
ಪಂಚಮಸಾಲಿ ಮುಖಂಡ ಸುರೇಶ ಬಿರಾದಾರ
ವಿಜಯಪುರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋರಾಟದ ದಿಕ್ಕು ತಪ್ಪಿಸಿದರೆ ಶಾಸಕ ಯತ್ನಾಳರ ಹಗರಣ, ದೌರ್ಬಲ್ಯಗಳನ್ನು ಹೊರ ಹಾಕಲಾಗುವುದು. ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವ ಬಗ್ಗೆ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಮಾಜಿ ಶಾಸಕರಾದ ವಿಜಯಾನಂದ ಕಾಶಪ್ಪನವರ, ವಿನಯ ಕುಲಕರ್ಣಿ ಜತೆ ಬಸನಗೌಡ ಪಾಟೀಲ ಸೇರಿದ್ದು, ಇದರ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ:'ಯತ್ನಾಳ್ ಅವರು ಮಂತ್ರಿ ಪದವಿ ಪಡೆದು ಸಮಾಜವನ್ನು ಮೇಲೆತ್ತುವ ಕೆಲಸ ಮಾಡಲಿ'