ವಿಜಯಪುರ: ಅಂದು ಅಯೋಧ್ಯೆಯಲ್ಲಿ ಹೋರಾಟ ಮಾಡಿದವರೆಲ್ಲ ಇಂದು ಶಾಸಕರು, ಸಂಸದರು, ಗ್ರಾಪಂ ಸದಸ್ಯರಾಗಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ನಗರದ ಸಿದ್ದೇಶ್ವರ ದೇವಸ್ಥಾನ ಬಳಿ ನಡೆದ ನಿಧಿ ಸಮರ್ಪಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರಾಮಮಂದಿರ ನಿರ್ಮಿಸುವ ನಿಟ್ಟಿನಲ್ಲಿ ಪೇಜಾವರ ವಿಶ್ವೇಶತೀರ್ಥ ಶ್ರೀಗಳು ನಿರಂತರವಾಗಿ ಶ್ರಮಿಸಿದ್ದಾರೆ. ದಲಿತರು, ಲಿಂಗಾಯತರು ಎಂಬ ಭೇದ ಭಾವವಿಲ್ಲದೇ ಹಿಂದೂ ಸಮಾಜ ಸಂಘಟನೆ ಮಾಡಿದ್ದಾರೆ ಎಂದರು.
ಅಯೋಧ್ಯೆಯಲ್ಲಿ ಹೋರಾಟ ಮಾಡಿದವರೆಲ್ಲ ಇಂದು ಶಾಸಕರು, ಸಂಸದರಾಗಿದ್ದಾರೆ: ಯತ್ನಾಳ್ ಇಷ್ಟು ವರ್ಷ ಹೋರಾಟ ಮಾಡಿದರೂ ರಾಮಮಂದಿರ ನಿರ್ಮಾಣ ಬಗ್ಗೆ ಎಲ್ಲರಿಗೂ ಸಂಶಯವಿತ್ತು. ನಾವು ರಾಜಕಾರಣಿಗಳು ಪ್ರತಿ ಚುನಾವಣೆ ಬಂದಾಗ ರಾಮಮಂದಿರ ನಿರ್ಮಾಣ ವಿಷಯ ಬರುತ್ತಿತ್ತು. ಇದು ಸಹಜವಾಗಿ ಜನರಿಗೆ ಇದೊಂದು ಚುನಾಚಣೆ ಅಜೆಂಡಾ ಎನ್ನುತ್ತಿದ್ದರು. ಕೊನೆ ಕೊನೆಗೆ ನಮಗೂ ಹಾಗೆ ಅನಿಸಲು ಆರಂಭವಾಯಿತು. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ರಾಮಮಂದಿರ ನಿರ್ಮಾಣ ಕಾಲ ಕೂಡಿ ಬಂದಿದೆ ಎಂದರು.
ಇನ್ನೂ ಮುಂದೆ ಕಾಶಿ, ಮಥುರಾಗಳಲ್ಲಿ ವಿಶ್ವನಾಥ, ಶ್ರೀ ಕೃಷ್ಣ ಮಂದಿರ ಹಾಗೂ ಕರ್ನಾಟಕದ ಅಂಜನಾದ್ರಿ ಬೆಟ್ಟದ ಹನುಮ ದೇವಸ್ಥಾನ ನಿರ್ಮಿಸುವ ಗುರಿಯನ್ನು ಅಯೋಧ್ಯೆಯ ಟ್ರಸ್ಟ್ ಹೊಂದಬೇಕು ಎಂದರು.
ಇದನ್ನೂ ಓದಿ:ತಣ್ಣಗಾಗದ ಗ್ರಾಪಂ ಚುನಾವಣಾ ವೈಷಮ್ಯ.. ಪಂಚಾಯತ್ ಅಧ್ಯಕ್ಷನ ಮನೆಗೇ ಬೆಂಕಿ..