ವಿಜಯಪುರ:ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅನಾರೋಗ್ಯವನ್ನೂ ಲೆಕ್ಕಿಸದೆ, ನಗರದಲ್ಲಿ ಪುನಶ್ಚೇತನಗೊಂಡ ಪುರಾತನ ಬಾವಿಯ ಗಂಗಾ ಪೂಜೆಯಲ್ಲಿ ಭಾಗಿಯಾಗಿದ್ದರು.
ಕೈಯಲ್ಲಿ ಸಲಾಯಿನ್ ಸಿರಿಂಜ್ ಇದ್ದರೂ ಗಂಗಾ ಪೂಜೆಯಲ್ಲಿ ಭಾಗಿಯಾದ ಯತ್ನಾಳ್ - basavanagowda Yatnal participating in the Ganga worship program in vijayapura
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅನಾರೋಗ್ಯವನ್ನೂ ಲೆಕ್ಕಿಸದೆ, ನಗರದಲ್ಲಿ ಪುನಶ್ಚೇತನಗೊಂಡ ಪುರಾತನ ಬಾವಿಯ ಗಂಗಾ ಪೂಜೆಯಲ್ಲಿ ಭಾಗಿಯಾಗಿದ್ದರು.
![ಕೈಯಲ್ಲಿ ಸಲಾಯಿನ್ ಸಿರಿಂಜ್ ಇದ್ದರೂ ಗಂಗಾ ಪೂಜೆಯಲ್ಲಿ ಭಾಗಿಯಾದ ಯತ್ನಾಳ್](https://etvbharatimages.akamaized.net/etvbharat/prod-images/768-512-4863488-thumbnail-3x2-sow.jpg)
ಬಲಗೈಗೆ ಸಲಾಯಿನ್ ಸೆಟ್ ಅಳವಡಿಸಿಕೊಂಡು ಗಂಗಾ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾದ ಯತ್ನಾಳ್
ಅನಾರೋಗ್ಯದ ನಡುವೆಯೂ ಬಲಗೈಗೆ ಸಲಾಯಿನ್ ಏರಿಸುವ ಸಿರಿಂಜ್ ಅಳವಡಿಸಿಕೊಂಡು ನಗರದ ವಾರ್ಡ್ ನಂಬರ್ 4ರಲ್ಲಿ ಪುನಶ್ಚೇತನಗೊಂಡ ಪುರಾತನ ಬಾವಿಯ ಗಂಗಾ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಪೂಜೆ ನೆರವೇರಿಸಿದರು.
ಕಳೆದ ಎರಡು ದಿನಗಳಿಂದ ಶಾಸಕ ಯತ್ನಾಳ್ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದ ಕಾರಣ, ಅವರ ಆರೋಗ್ಯದಲ್ಲಿ ಏರಪೇರಾಗಿತ್ತು. ಹೀಗಾಗಿ ವೈದ್ಯರು, ಶಾಸಕ ಯತ್ನಾಳ್ ಅವರಿಗೆ ವಿಶ್ರಾಂತಿ ಪಡೆಯುವಂತೆ ತಿಳಿಸಿದ್ರು.