ಕರ್ನಾಟಕ

karnataka

ETV Bharat / state

ಬಾರದ ಕರೆ: ನಮ್ಮ ಮೊಬೈಲ್​ ಕರೆನ್ಸಿ ಖಾಲಿ ಆಗೈತಿ ಎಂದ ಯತ್ನಾಳ್​​ - -place-in-cabinet-ex'tend

ನನ್ನ ಮೊಬೈಲ್​ನಲ್ಲಿ ಕರೆನ್ಸಿ ಖಾಲಿಯಾಗಿದೆ. ಯಾವುದೇ ಕರೆ ಬಂದಿಲ್ಲ ಎನ್ನುವ ಮೂಲಕ ತಮಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಪರೋಕ್ಷವಾಗಿ ಹೇಳಿದರು.

ಯತ್ನಾಳ್
ಯತ್ನಾಳ್

By

Published : Jan 12, 2021, 10:51 PM IST

ವಿಜಯಪುರ: ನನ್ನ ಮೊಬೈಲ್​ನಲ್ಲಿ ಕರೆನ್ಸಿ ಖಾಲಿಯಾಗಿದೆ. ಯಾವುದೇ ಕರೆ ಬಂದಿಲ್ಲ ಎನ್ನುವ ಮೂಲಕ ತಮಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಪರೋಕ್ಷವಾಗಿ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ

ಸಚಿವ ಸಂಪುಟ ವಿಸ್ತರಣೆ ವೇಳೆ ತಮಗೆ ಸಚಿವ ಸ್ಥಾನ ಸಿಗಬಹುದು ಎಂದು ಕೇಳಿದ್ದೆವು. ಆದರೆ ಫೋನ್ ಬಂದಿಲ್ಲ ಎಂದರೆ ಅಚ್ಚರಿ ಮೂಡಿಸುತ್ತಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್​, ಬೆಂಗಳೂರಿಗೆ ಹೋಗುತ್ತಿಲ್ಲ, ಅಲ್ಲಿ ಏನು ಕೆಲಸವಿಲ್ಲ. ಯಾವುದೇ ಕರೆ ಬಂದಿಲ್ಲ, ಕರೆನ್ಸಿ ಖಾಲಿಯಾಗಿದೆ ಎಂದು ಮಾರ್ಮಿಕವಾಗಿ ನುಡಿದರು. ವಿಜಯಪುರದ ಸಿದ್ದೇಶ್ವರ ಜಾತ್ರೆ ಹಿನ್ನೆಲೆ ಇಲ್ಲಿ ಸೇರಿದ್ದೇವೆ. ದೇವಾಲಯಕ್ಕೆ ಬಂದಿದ್ದೇನೆ. ಇಲ್ಲಿ ರಾಜಕೀಯ ಬೇಡ ಎಂದರು.

ABOUT THE AUTHOR

...view details