ವಿಜಯಪುರ: ವಿಜಯಪುರದಲ್ಲಿ ನಕಲಿ ಭೂ ದಾಖಲೆ ಸೃಷ್ಟಿಯ ಹಾವಳಿ ಹಾಗೂ ಅಕ್ರಮ ಆಸ್ತಿಯನ್ನು ಸರ್ಕಾರ ಸಿಐಡಿ ತನಿಖೆ ನಡೆಸುವಂತೆ ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಆಗ್ರಹಿಸಿದ್ದಾರೆ.
ನಕಲಿ ದಾಖಲಾತಿ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಆಸ್ತಿ ಅವ್ಯವಹಾರ ಆಗಿದೆ. ಅನ್ಯ ಊರುಗಳಿಗೆ ಹೋಗಿ ನೆಲೆಸಿದವರನ್ನು ಗುರುತಿಸಿ ಅವರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಇದರ ಹಿಂದೆ ಕೆಲವು ರಾಜಕೀಯ ಹಿತಾಸಕ್ತಿಗಳು ಸಹ ಇವೆ. ಹೀಗಾಗಿ, ರಾಜ್ಯದಲ್ಲಿಯೇ ಇದೊಂದು ದೊಡ್ಡ ಜಾಲ ಇದ್ದು, ಸಿಐಡಿ ತನಿಖೆ ಮಾಡಲು ಮತ್ತೊಮ್ಮೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುವೆ ಎಂದರು.