ವಿಜಯಪುರ: ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಅಪ್ಪು ಪಟ್ಟಣಶೆಟ್ಟಿ ಶಾಸಕ ಯತ್ನಾಳ್ ವಿರುದ್ಧ ಹತ್ತಾರು ಆರೋಪಗಳನ್ನ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದ ಶಾಸಕ ಯತ್ನಾಳ್, ಬೀದಿನಾಯಿಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ ಎಂದಿದ್ದರು. ಈ ಹೇಳಿಕೆಯಿಂದ ಕೆಂಡಾಮಂಡಲರಾದ ಅಪ್ಪು ಪಟ್ಟಣಶೆಟ್ಟಿ ಖಾರವಾಗಿ ಪ್ರತ್ರಿಯಿಸಿದ್ದಾರೆ. ಯತ್ನಾಳ್ ನಾನು ಮಾಡಿದ ಆರೋಪಗಳಿಗೆ ಸುದ್ದಿಗೋಷ್ಠಿ ನಡೆಸಿ ಉತ್ತರ ನೀಡಲಿ ಎಂದು ಸವಾಲು ಹಾಕಿದ್ದಾರೆ.
ಧೈರ್ಯ ಇದ್ದರೇ ಯತ್ನಾಳ್ ಬಹಿರಂಗವಾಗಿ ಉತ್ತರ ನೀಡಲಿ.. ಅಪ್ಪು ಪಟ್ಟಣಶೆಟ್ಟಿ ಸವಾಲು - ಶಾಸಕ ಬಸನಗೌಡ ಯತ್ನಾಳ್
ಸ್ವಪಕ್ಷೀಯ ಮಾಜಿ ಸಚಿವನನ್ನ ಬೀದಿ ನಾಯಿಗೆ ಹೋಲಿಸಿದ್ದ ಶಾಸಕ ಬಸನಗೌಡ ಯತ್ನಾಳ್ರಿಗೆ ಮಾಜಿ ಸಚಿವ ಅಪ್ಪು ಪಟ್ಟಣ ಶೆಟ್ಟಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಅಪ್ಪು ಪಟ್ಟಣಶೆಟ್ಟಿ, ಶಾಸಕ ಯತ್ನಾಳ್ಗೆ ಧೈರ್ಯ, ತಾಕತ್ತು ಇದ್ದರೇ ಸುದ್ದಿಗೋಷ್ಠಿ ನಡೆಸಿ ಉತ್ತರ ಕೊಡಲಿ ಎಂದು ಪ್ರತಿ ಸವಾಲ್ ಹಾಕಿದರು. ಈ ಹಿಂದೆ ಇದೇ ಯತ್ನಾಳ್ ಯಡಿಯೂರಪ್ಪ ವಿರುದ್ಧ ಮಾತನಾಡಿದ್ದಾರೆ. ಈಗ ಮತ್ತೆ ಬಿಜೆಪಿ ನಾಯಕರ ವಿರುದ್ಧ ಮಾತನಾಡೋಕೆ ಶುರು ಮಾಡಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಅವರ ವಿರುದ್ಧವೂ ಪರೋಕ್ಷ ವಾಗ್ದಾಳಿ ನಡೆಸಿದ ಯತ್ನಾಳರನ್ನ ಇಲ್ಲಿಗೆ ಬಿಡೋದಿಲ್ಲ ಎಂದು ಹರಿಹಾಯ್ದರು.
ಯತ್ನಾಳ್ ಮುಖವಾಡ ಬಯಲಿಗೆ ತರೋವರೆಗೆ ಅವರನ್ನ ಬಿಡಲ್ಲ. ಇದು ಬಿಜೆಪಿ ವರ್ಸಸ್ ಬಿಜೆಪಿ ಅಲ್ಲ. ಅಪ್ಪು ವರ್ಸಸ್ ಯತ್ನಾಳ್. ಇದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗಲ್ಲ. ನನ್ನ ಹಾಗೂ ಯತ್ನಾಳ್ ನಡುವೆ ದ್ವೇಷ, ರಾಜ್ಯ ನಾಯಕರಿಗೂ ಗೊತ್ತಿದೆ ಎಂದರು.