ಕರ್ನಾಟಕ

karnataka

ETV Bharat / state

ವಿಜಯಪುರ: ಅರಣ್ಯ ಇಲಾಖೆ ಶ್ರಮಜೀವಿಗಳಿಗೆ ಪರಿಸರ ರಕ್ಷಕ ಪ್ರಶಸ್ತಿ ಪ್ರದಾನ - ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು

ವಿಜಯಪುರ ಜಿಲ್ಲೆಯ ಮದ್ದೇಬಿಹಾಳ ಪಟ್ಟಣದ ಹುಡ್ಕೋದ ಹಸಿರು ತೋರಣ ಉದ್ಯಾನದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.

World Environment Day program in vijyapura
ವಿಜಯಪುರ: ಅರಣ್ಯ ಇಲಾಖೆ ಶ್ರಮಜೀವಿಗಳಿಗೆ ಪರಿಸರ ರಕ್ಷಕ ಪ್ರಶಸ್ತಿ ಪ್ರದಾನ

By

Published : Jun 5, 2020, 6:44 PM IST

ಮುದ್ದೇಬಿಹಾಳ(ವಿಜಯಪುರ): ಪಟ್ಟಣದ ಹುಡ್ಕೋದ ಹಸಿರು ತೋರಣ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಸಾಧಕರಿಗೆ ಪರಿಸರ ರಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಜಯಪುರ: ಅರಣ್ಯ ಇಲಾಖೆ ಶ್ರಮಜೀವಿಗಳಿಗೆ ಪರಿಸರ ರಕ್ಷಕ ಪ್ರಶಸ್ತಿ ಪ್ರದಾನ

ಈ ವೇಳೆ ಮಾತನಾಡಿದ ಸಾಮಾಜಿಕ ವಲಯ ಅರಣ್ಯಾಧಿಕಾರಿ ಸಂತೋಷ ಅಜೂರ್, ಪರಿಸರದ ಉಳಿವಿಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದೆ. ಎಲ್ಲವೂ ಅರಣ್ಯ ಇಲಾಖೆಯೇ ಮಾಡಲಿ, ಸರ್ಕಾರವೇ ಮಾಡಲಿ ಎಂದರೆ ಸಾಧ್ಯವಾಗದು. ಒಗ್ಗಟ್ಟಿನಿಂದ ಪರಿಸರದ ರಕ್ಷಣೆಗೆ ಮುಂದಾಗುವ ಅಗತ್ಯತೆಯಿದೆ ಎಂದರು.

ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಮಾತನಾಡಿ, ಪಟ್ಟಣದ ವ್ಯಾಪ್ತಿಯಲ್ಲಿ ಸಾಕಷ್ಟು ಉದ್ಯಾನಗಳಿದ್ದು,ಅವುಗಳು ಒತ್ತುವರಿಯಾಗಿವೆ. ಅವುಗಳನ್ನ ಗುರುತಿಸಿ ಅಭಿವೃದ್ಧಿಪಡಿಸುವ ಕೆಲಸ ಪುರಸಭೆಯಿಂದಾಗಬೇಕು ಎಂದರು.

ಪರಿಸರ ರಕ್ಷಕ ಪ್ರಶಸ್ತಿ ಪ್ರದಾನ: ಪರಿಸರಕ್ಕಾಗಿ ನಿರಂತರ ಶ್ರಮಿಸಿದ ಸಾಮಾಜಿಕ ಅರಣ್ಯ ಇಲಾಖೆಯ ಸಿಬ್ಬಂದಿ ದಸ್ತಗೀರಸಾಬ್​​ ನಿಡಗುಂದಿ (ಢವಳಗಿ),ಬಾಳಪ್ಪ ಕಾನಕ್ಕಿ (ಹುನಕುಂಟಿ),ಪ್ರಾದೇಶಿಕ ಅರಣ್ಯ ಇಲಾಖೆಯ ಕಾಶೀನಾಥ ಬಸಪ್ಪ ಉಳಾಗಡ್ಡಿ (ಹೊಕ್ರಾಣಿ), ದಶರಥ ಚಲವಾದಿ (ಗುಡಿಹಾಳ) ಹಾಗೂ ವ್ಯಕ್ತಿ, ಸಂಘ ಸಂಸ್ಥೆಗಳ ವಿಭಾಗದಿಂದ ರಫೀಕ್​​​​​ ಢವಳಗಿ, ಸಾಥಪ್ಪ ಗುರುಬಟ್ಟಿ, ಸಾಹೇಬಗೌಡ ಬಿರಾದಾರ ಅವರಿಗೆ ಪರಿಸರ ರಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ABOUT THE AUTHOR

...view details