ಕರ್ನಾಟಕ

karnataka

ETV Bharat / state

ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಕುರಿತು ಕಾರ್ಯಾಗಾರ.. ವಿದ್ಯಾರ್ಥಿಗಳಿಗೆ ಮೇಷ್ಟ್ರು ಆದ ವಿಜಯಪುರದ ಸಿಇಒ - ವಿದ್ಯಾರ್ಥಿಗಳಿಗೆ ಮೇಷ್ಟ್ರು ಆದ ವಿಜಯಪುರದ ಸಿಇಒ

ವಿಜಯಪುರ ನಗರದ ಕಂದಗಲ್ ಹನುಮಂತ ರಾಯ ರಂಗಮಂದಿರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಕುರಿತು ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಸಾವಿರಾರು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾಹಿತಿ ಪಡೆದರು.

Workshop on Competitive exam preparation at vijaypur
ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಕುರಿತು ಕಾರ್ಯಗಾರ

By

Published : Nov 16, 2021, 3:38 PM IST

ವಿಜಯಪುರ:ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಯಾಗುವ ವಿದ್ಯಾರ್ಥಿಗಳಿಗೆ ವಿಜಯಪುರ ಜಿಲ್ಲಾ ಪಂಚಾಯತ್​​ ಸಿಇಒ ವಿಷಯ ಬೋಧನೆ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಜ್ಜುಗೊಳಿಸಿದರು.

ನಗರದ ಕಂದಗಲ್ ಹನುಮಂತ ರಾಯ ರಂಗಮಂದಿರದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ರು.

ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಕುರಿತು ಕಾರ್ಯಾಗಾರ

ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಜಿಲ್ಲಾ ಪಂಚಾಯತ್​ ಸಿಇಒ ಗೋವಿಂದ ರೆಡ್ಡಿ ಹಾಗೂ ಎಸ್ಪಿ ಆನಂದಕುಮಾರ್​ ಐಎಎಸ್, ಐಪಿಎಸ್, ಬ್ಯಾಂಕಿಂಗ್ ಪರೀಕ್ಷೆಗಳನ್ನು ಎದುರಿಸಲು ಯಾವ ರೀತಿ ತಯಾರಿ ನಡೆಸಬೇಕು, ನಿತ್ಯ ಎಷ್ಟು ಗಂಟೆ ಓದಬೇಕು, ಪ್ರಶ್ನೆಗಳನ್ನು ಯಾವ ರೀತಿ ಅರ್ಥೈಸಿಕೊಂಡು ಅವುಗಳಿಗೆ ಯಾವ ರೀತಿ ಜಾಣ್ಮೆಯ ಉತ್ತರ ನೀಡಬೇಕು ಎನ್ನುವುದನ್ನು ವಿವರಿಸಿದರು.‌

ಪರೀಕ್ಷೆಗೆ ಪೂರ್ವ ತಯಾರಿ:

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ವಿದ್ಯಾಭ್ಯಾಸ ಮಾಡಿಕೊಂಡಿದ್ದರೆ ಮಾತ್ರ ನಾವು ಅಂದುಕೊಂಡ ಗುರಿ ಸಾಧಿಸಬಹುದು. ಗುರಿ ಸಾಧಿಸುವುದು ಹೇಗೆ? ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ವಿವರಣೆ ಸಮೇತ ತಿಳಿ ಹೇಳಿದರು.‌ ತಾವು ಈ‌ ಹಂತಕ್ಕೆ ಬರಲು ಯಾವ ರೀತಿ ಪೂರ್ವ ತಯಾರಿ ನಡೆಸಿದ್ದೆವು. ಇದರಲ್ಲಿ ಕುಟುಂಬದ ಪಾತ್ರ ಎಷ್ಟು ಮುಖ್ಯ, ವಿಷಯಾಧಾರಿತ ಶಿಕ್ಷಕರ ಜೊತೆ ಯಾವ ರೀತಿ ಒಡನಾಟ ಹೊಂದಿರಬೇಕು ಎನ್ನುವುದನ್ನು ಸಹ ತಿಳಿಹೇಳಿದರು.‌

ಎಸ್​ಪಿ ಸಲಹೆ:

ಈ ವೇಳೆ ಮಾತನಾಡಿದ ಎಸ್​ಪಿ ಆನಂದಕುಮಾರ್​ ನಾವು ಎಷ್ಟು ದಿನ ಬಾಳಿ ಬದುಕುತ್ತೇವೆ ಎಂಬುದು ಯಾರಿಗೂ ಗೊತ್ತಿಲ್ಲ. ಒಂದೊಂದು ದಿನ ಕಳೆದಂತೆ ನಮ್ಮ ಆಯುಷ್ಯ ಕಡಿಮೆಯಾಗಿ ಹೋಗುತ್ತಿದೆ. ನಾವು ಅಂದುಕೊಂಡ ಗುರಿಯತ್ತ ದಾಪುಗಾಲಿಡಬೇಕು. ಆ ನಿಟ್ಟಿನಲ್ಲಿ ನಾವು ಸದಾ ಪ್ರಯತ್ನ ಮಾಡಬೇಕು. ದಿನದ 24 ಗಂಟೆಗಳ ಕಾಲದಲ್ಲಿ ನಾವು ಸಾಧನೆ ಮಾಡಲು ಎಷ್ಟು ಸಮಯ ಮೀಸಲಿಡಬೇಕು ಎಂಬುದರ ಕುರಿತು ಆಲೋಚಿಸಿ ವಿದ್ಯಾಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.

ಜಿ.ಪಂ. ಸಿಇಓ ಪಾಠ:

ಜಿಲ್ಲಾ ಪಂಚಾಯತ್​​‌ ಸಿಇಒ ಗೋವಿಂದ ರೆಡ್ಡಿ ಸ್ವತಃ ಶಿಕ್ಷಕನ ರೀತಿ ಪಾಠ ಮಾಡಿದರು. ಕೆಲಸ ದೊಡ್ಡದಾಗಲಿ, ಚಿಕ್ಕದಿರಲಿ, ಯಾವುದೇ ಪರೀಕ್ಷೆಗೆ ತಯಾರಿ ನಡೆಸುವವರು ಯಾವ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು. ಜೊತೆಗೆ ಸರ್ಕಾರಿ ನೌಕರಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಮೀಸಲಾತಿಗಳನ್ನು ಯಾವ ಯಾವ ತರಹ ಪಡೆಯಬಹುದು ಎಂಬುದನ್ನು ಸಹಿತ ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ವಿವರಿಸಿದರು.

ಇದನ್ನೂ ಓದಿ:ಪುನೀತ್ ರಾಜ್‍ಕುಮಾರ್ ನುಡಿನಮನ ಕಾರ್ಯಕ್ರಮಕ್ಕೆ ಹೊರಟ ಶಕ್ತಿಧಾಮದ ಮಕ್ಕಳು

ನ್ಯಾಯವಾದಿ ಶ್ರೀನಾಥ್ ಪೂಜಾರಿ ಸಹ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮಾಡಬೇಕು ಎಂದರೆ ಸುದೀರ್ಘ ಪರಿಶ್ರಮ ಬೇಕು. ಅದಕ್ಕೆ ವಿದ್ಯಾರ್ಥಿಗಳೆಲ್ಲರೂ ಪ್ರಯತ್ನ ಮಾಡಬೇಕು ಎಂದರು.

ವಿವಿಧ ಶಾಲಾ-ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯ ಕುರಿತು ಮಾಹಿತಿ ಪಡೆದರು.

ABOUT THE AUTHOR

...view details