ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ಬಳಿಕ ಬೆಂಗಳೂರಿನಿಂದ ವಿಜಯಪುರಕ್ಕೆ ಬಂದಿಳಿದ ಕಾರ್ಮಿಕರು... - ಕೆಎಸ್ಆರ್​ಟಿಸಿ ಬಸ್​

ಇಷ್ಟುದಿನ ಲಾಕ್​ಡೌನ್​ ನಿಂದಾಗಿ ಬೆಂಗಳೂರಿನಲ್ಲಿ ಸಿಲುಕಿಕೊಂಡಿದ್ದ ಜಿಲ್ಲೆಯ ಕಾರ್ಮಿರಿಗೆ ಜಿಲ್ಲಾಡಳಿತ ಬಸ್​ ವ್ಯವಸ್ಥೆ ಕಲ್ಪಿಸಿ ಮರಳಿ ಗೂಡಿಗೆ ಕರೆದುಕೊಂಡು ಬಂದಿದೆ.

Vijayapura
ವಿಜಯಪುರ

By

Published : May 4, 2020, 12:48 PM IST

ವಿಜಯಪುರ: ಕಳೆದ 40 ದಿನಗಳಿಂದ ಬೆಂಗಳೂರಿನ ವಿವಿಧೆಡೆ ಸಿಲುಕಿಕೊಂಡಿದ್ದ ವಿಜಯಪುರ ಜಿಲ್ಲೆಯ ಕಾರ್ಮಿಕರು ಇಂದು ತಮ್ಮ ಊರುಗಳಿಗೆ​ ಬಂದಿಳಿದಿದ್ದಾರೆ.

ಬೆಂಗಳೂರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ನೂರಾರು ಕಾರ್ಮಿಕರನ್ನು ಕರೆ ತರಲು ಜಿಲ್ಲಾಡಳಿತ 60ಕ್ಕೂ ಹೆಚ್ಚು ಕೆಎಸ್ಆರ್​ಟಿಸಿ ಬಸ್​ಗಳ ವ್ಯವಸ್ಥೆ ಮಾಡಿತ್ತು. ಇಂದು ಬೆಂಗಳೂರಿನಿಂದ ಹಲವು ಬಸ್​ಗಳಲ್ಲಿ ಕಾರ್ಮಿಕರನ್ನು ಕರೆದುಕೊಂಡು ವಿಜಯಪುರಕ್ಕೆ ಆಗಮಿಸಿದೆ.

ಬೆಂಗಳೂರಿನಿಂದ ವಿಜಯಪುರಕ್ಕೆ ಬಂದಿಳಿದ ಕಾರ್ಮಿಕರು

ಸಾಮಾಜಿಕ ಅಂತರ ಕಾಯ್ದುಕೊಳ್ಳಲುವ ಸಲುವಾಗಿ ಒಂದು ಬಸ್​ನಲ್ಲಿ 36 ಜನರಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಕಾರ್ಮಿಕರು ವಿಜಯಪುರಕ್ಕೆ ಬಂದಿಳಿದ ತಕ್ಷಣ ಸ್ಕ್ರೀನಿಂಗ್ ಟೆಸ್ಟ್ ಮಾಡಲಾಯಿತು. ಅಲ್ಲದೇ ಪ್ರಯಾಣಿಕರಿಗೆ ಜಿಲ್ಲಾಡಳಿತದಿಂದ ತಿಂಡಿ ವ್ಯವಸ್ಥೆ ಮಾಡಲಾಗಿತ್ತು.

ಇನ್ನು ಇಂದು ರಾತ್ರಿಯೂ ಸಹ ಬೆಂಗಳೂರಿನಿಂದ ಕಾರ್ಮಿಕರನ್ನು ಕರೆ ತರಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ABOUT THE AUTHOR

...view details