ಕರ್ನಾಟಕ

karnataka

ETV Bharat / state

ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರನ್ನು ಖಾಯಂಗೊಳಿಸುವಂತೆ ಮನವಿ - Women's health aides Appeal

ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರನ್ನು ಕಾಯಂಗೊಳಿಸಬೇಕು.‌ ಸಮಾನ ವೇತನ, ವಸತಿಗೃಹ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ವಿಜಯಪುರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Women's health aides Appeal to the CM
ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರನ್ನು ಖಾಯಂಗೊಳಿಸಿವಂತೆ ಸಿಎಂಗೆ ಮನವಿ

By

Published : Jul 27, 2020, 4:27 PM IST

ವಿಜಯಪುರ:ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿಗೆ ಸಮಾನ ವೇತನ ನೀಡಿ, ಖಾಯಂಗೊಳಿಸುವಂತೆ ಕಿರಿಯ ಮಹಿಳಾ‌‌ ಆರೋಗ್ಯ ಸಹಾಯಕರು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರನ್ನು ಖಾಯಂಗೊಳಿಸುವಂತೆ ಸಿಎಂಗೆ ಮನವಿ

ಕೊರೊನಾ ಆರಂಭದ ದಿನಗಳಿಂದ ಜಿಲ್ಲೆಯಲ್ಲಿನ 80ಕ್ಕೂ ಅಧಿಕ ಕಿರಿಯ ಮಹಿಳಾ‌‌ ಆರೋಗ್ಯ ಸಹಾಯಕರು ಜೀವದ ಹಂಗು ತೊರೆದು ರಜೆ ಪಡೆಯದೆ, ಕಂಟೇನ್ಮೆಂಟ್​ ಝೋನ್ ಸೇರಿದಂತೆ ವಿವಿಧೆಡೆ ಕಾರ್ಯ ನಿರ್ವಹಿಸಿದ್ದಾರೆ. ಆದರೆ, ನಮಗೆ ವೇತನ ಕಡಿಮೆಯಿದ್ದು, ಸರ್ಕಾರದ ಯಾವುದೇ ಸೌಲಭ್ಯಗಳೂ ದೊರೆಯುತ್ತಿಲ್ಲ.

ಈ ಬಗ್ಗೆ ಎಷ್ಟೇ ಹೋರಾಟ ಮಾಡಿದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎಂದು ಜಿಲ್ಲಾಧಿಕಾರಿ ಬಳಿ ಅಳಲು ತೊಡಿಕೊಂಡರು‌.

ABOUT THE AUTHOR

...view details